ವಿಟ್ಲ: ವಿಟ್ಲಪಡ್ನೂರು ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಶ ಶೆಟ್ಟಿ ಕರ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮದೊಳಗೆ ಅಭಿವೃದ್ಞದಿ ಕಾರ್‍ಯಗಳ ಮಧ್ಯೆ ಇನ್ನಷ್ಟೂ ಸಮಸ್ಯೆಗಳು ಹುಟ್ಟಿಕೊಳ್ಳುವುದು ಸಹಜ. ಗ್ರಾಮಸ್ಥರ ಸಮಸ್ಯೆಗಳ ಗಂಭೀರತೆಯನ್ನು ಪರಿಗಣಿಸಿ ತಕ್ಷಣ ಅದರ ನಿವಾರಣೆಗೆ ಬೇಕಾದ ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರ ಸಲಹೆ ಸೂಚನೆಗಳೇ ಗ್ರಾಮಸಭೆಯಲ್ಲಿ ಪ್ರಮುಖವಾಗಿದೆ. ಸಂಸದರ, ಶಾಸಕರ ಹಾಗೂ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರುಗಳ ಸಹಕಾರದಿಂದ, ಸರಕಾರದಿಂದ ದೊರಕುವ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿಕೊಂಡು ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮ ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಬಂಟ್ವಾಳ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್‍ಯನಿರ್ವಾಹಕ ಅಭಿಯಂತರ ಮಹೇಶ್ ನಡೆಸಿಕೊಟ್ಟರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಮಾಧವ ಮಾವೆ ಮಾತನಾಡಿ ಯಶಸ್ವಿ ಗ್ರಾಮ ಸಭೆಗೆ ಗ್ರಾಮದ ಜನರ ಪಾಲ್ಗೊಳ್ಳುವಿಕೆ ಅಗತ್ಯ, ಗ್ರಾಮಸ್ಥರು ಗ್ರಾಮಾಭಿವೃದ್ಧಿಯಲ್ಲಿ ಸಾಕಷ್ಟು ಕಾಳಜಿ ವಹಿಸಬೇಕು. ಜಿಲ್ಲಾ ಪಂಚಾಯಿತಿ ವತಿಯಿಂದ ಸಿಗುವ ಹೆಚ್ಚಿನ ಅನುದಾನವನ್ನು ಒದಗಿಸಿಕೊಟ್ಟು ಗ್ರಾಮ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ತಾಲೂಕು ಪಂಚಾಯಿತಿ ಸದಸ್ಯರಾದ ಶೋಭಾ.ಪಿ. ರೈ ಗ್ರಾಮಸ್ಥರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್‌ರಾಜ್ ಇಂಜಿನಿಯರ್ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಶಿಶು ಅಭಿವೃದ್ದಿ ಇಲಾಖೆ, ಮೆಸ್ಕಾಂ ಇಲಾಖೆ, ಇವರುಗಳು ತಮ್ಮ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುಧಾ.ಎಸ್. ಶೆಟ್ಟಿ, ಸದಸ್ಯರಾದ ಜಯಂತ, ನಾಗೇಶ್ ಕುಮಾರ್, ರೇಶ್ಮಾ ಶಂಕರಿ, ಶರವು ಅಬೂಬಕ್ಕರ್ ಸಿದ್ದಿಕ್, ಪ್ರೇಮಲತಾ, ಅಬ್ದುಲ್ಲ.ಕೆ, ಭಾರತಿ ಎಸ್ ಶೆಟ್ಟಿ, ಅಬ್ದುಲ್ ರಹಿಮಾನ್, ಶಿನೆಬಿಸಾ ಕೆ. ಎಚ್, ಭಾಸ್ಕರ ಶೆಟ್ಟಿಗಾರ್, ದಾಕ್ಷಾಯಣಿ ಅಂಗನವಾಡಿ ಮತ್ತು ಆಶಾ ಕಾರ್‍ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿಡಿಒ ಸುಜಯ.ಕೆ ಸ್ವಾಗತಿಸಿ ವಂದಿಸಿದರು, ಪಂಚಾಯಿತಿ ಗುಮಾಸ್ತ ದೇವಪ್ಪ.ಪಿ ವರದಿ ಮಂಡಿಸಿದರು ಪಂಚಾಯತ್ ಸಿಬ್ಬಂದಿಗಳಾದ ಕೃಷ್ಣನಾಯ್ಕ ಕೆ, ಯತೀಶ.ಪಿ, ಮಹೇಶ್ ಪಿ, ಹರಿಣಾಕ್ಷಿ.ಪಿ ಸಹಕರಿಸಿದರು.

