Tuesday, February 3, 2026

ಒಡಿಯೂರುಶ್ರೀ ಜನ್ಮದಿನೋತ್ಸವ: ಪುಣಚದಲ್ಲಿ ಗ್ರಾಮ ಸ್ವಚ್ಛತೆ

ವಿಟ್ಲ: ಒಡಿಯೂರು ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ ಅಂಗವಾಗಿ ಪುಣಚ ಗ್ರಾಮದಲ್ಲಿ ಸ್ವಚ್ಚತಾ ಕಾರ್‍ಯಕ್ರಮ ನಡೆಯಿತು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಪುಣಚ ಘಟ ಸಮಿತಿ ವತಿಯಿಂದ ಆಯೋಜಿಸಲಾದ ಪುಣಚ ಗ್ರಾಮ ಸ್ವಚ್ಛತಾ ಕಾರ್‍ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಸಮಾಜ ನಮ್ಮದಾಗಬೇಕು. ಯಾವಾಗ ನಾವು ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತೇವೆಯೋ ಅವಾಗ ನಮ್ಮ ರಾಷ್ಟ್ರ ಸ್ವಸ್ಥ ರಾಷ್ಟ್ರವಾಗಲು ಸಾಧ್ಯ ಎಂದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕಿನ ವಿಸ್ತರಣಾಧಿಕಾರಿಯಾದ ಸದಾಶಿವ ಅಳಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ವೇದಿಕೆಯಲ್ಲಿ ಒಡಿಯೂರು ಶ್ರೀ ವಿದ್ಯಾಪೀಠದ ಶಿಕ್ಷಕರಾದ ಶರತ್ ಆಳ್ವ, ಪುಣಚ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಹರ್ಷ ಶಾಸ್ತ್ರಿ, ಗ್ರಾಮ ಸಂಯೋಜಕಿ ಲೀಲಾ ಕೆ, ಘಟಸಮಿತಿ ಅಧ್ಯಕ್ಷರಾದ ಉಮಾ ರೈ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಕುಸುಮ, ವಿಜಯ ಆಶಯ ಗೀತೆ ಹಾಡಿದರು. ನಿಕಟಪೂರ್ವ ಸಂಘಟನಾ ಕಾರ್‍ಯದರ್ಶಿ ಪುರಂದರರವರು ಸ್ವಾಗತಿಸಿದರು. ಗುಂಪಿನ ಸದಸ್ಯೆ ಜಲಜಾಕ್ಷಿಯವರು ವಂದಿಸಿದರು. ನಿಕಟಪೂರ್ವ ಘಟಸಮಿತಿ ಅಧ್ಯಕ್ಷರಾದ ರಾಜೇಂದ್ರ ರೈಯವರು ಕಾರ್‍ಯಕ್ರಮ ನಿರೂಪಿಸಿದರು.
ಪುಣಚ ಗ್ರಾಮದ ಸೇವಾದೀಕ್ಷಿತೆ ಗೀತಾ, ಲೆಕ್ಕಪರಿಶೋಧಕಿ ರೇಶ್ಮಾ, ಸೇವಾದೀಕ್ಷಿತರಾದ ಶಶಿಪ್ರಭಾ, ಗುಲಾಬಿ, ಘಟಸಮಿತಿ ಪದಾಧಿಕಾರಿಗಳು, ಗುಂಪಿನ ಸದಸ್ಯರು, ಶಾಲಾಮಕ್ಕಳು ಸಹಕರಿಸಿದರು.

More from the blog

ಮತ್ತೆ ಚಿನ್ನದ ಬೆಲೆ ಕುಸಿತ ! ಇಂದಿನ ದರ ಎಷ್ಟಿದೆ ಗೊತ್ತಾ?

ಮಂಗಳೂರು: ಕಳೆದ ಕೆಲವು ದಿನಗಳಿಂದ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈಗ ಸತತವಾಗಿ ಇಳಿಕೆ ಕಾಣುತ್ತಿವೆ. ಫೆಬ್ರವರಿ 3 2026, ಮಂಗಳವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್‌ನ ಚಿನ್ನದ ಬೆಲೆಯು...

ರಾಜ್ಯದ ರೈಲ್ವೆ ಯೋಜನೆಗಳಿಗೆ 7748 ಕೋಟಿ ರೂ. ಅನುದಾನ : ಸಚಿವ ವಿ.ಸೋಮಣ್ಣ

ಬೆಂಗಳೂರು : ರಾಜ್ಯದ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ 7748 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಈ ವಿಚಾರವಾಗಿ ಮಾಹಿತಿ ನೀಡಿದ ಅವರು, 2009ರಿಂದ...

ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು. ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್...

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಸಂಸದ ಕ್ಯಾ. ಚೌಟ ಮನವಿ

ನವದೆಹಲಿ: ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ ('ಸಮುದ್ರ ತೀರದ ಪವನ ಶಕ್ತಿ' Offshore Wind Energy)...