ಬಂಟ್ವಾಳ: ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಸಂಚಾಲನ ಸಮಿತಿ ವತಿಯಿಂದ “ಗ್ರಹಣ ಆಹಾರ ಸೇವನೆಗೆ ಅಡ್ಡಿಯಿಲ್ಲ ಮೌಡ್ಯ ತೊರೆದು ಆಹಾರ ಸೇವಿಸೋಣ” ಕಾರ್ಯಕ್ತಮ ಭಾನುವಾರ ಬಂಟ್ವಾಳಕ್ಕೆ ಸಮೀಪದ ಚಂಡ್ತಿಮಾರ್ ನಲ್ಲಿ ನಡೆಯಿತು.ಅತಿಥಿಯಾಗಿದ್ದ ಮಾನವ ಬಂಧತ್ವ ವೇದಿಕೆಯ ಜಿಲ್ಲಾ ಸಂಚಾಲಕ ಚೆನ್ನಕೇಶವ ಅವರು ಮಾತನಾಡಿ ಅನಾಧಿಕಾಲದಿಂದ ಶೋಷಿತ ಜನಾಂಗದಲ್ಲಿ ಮೌಢ್ಯವನ್ನು ತುಂಬಲಾಗುತ್ತದೆ.ಅದನ್ನು ತೊರೆದು ವೈಜ್ಙಾನಿಕ ಮನೋಭಾವನೆ ಬೆಳಸಿಕೊಳ್ಳುವ ಅವಶ್ಯಕತೆ ಇದೆ.ಇಲ್ಲವಾದಲ್ಲಿ ಮಾನವ ಅವನತಿಯ ದಾರಿಯಲ್ಲಿ ಸಾಗುತ್ತಾನೆ ಎಂದರು. ಬಂಟ್ವಾಳ ತಾ.ಸಂಚಾಲಕ ರಾಜ ಚಂಡ್ತಿಮಾರ್,ತಾಲೂಕು ಸಂಯೋಜಕ ಪ್ರಭಾಕರ ದೈವಗುಡ್ಡೆ,ಡಿವೈಎಫ್ ಐ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್,ಸಾಮಾಜಿಕ ಕಾರ್ಯಕರ್ತರಾದ ಸಾದಿಕ್ ಬಡ್ಡಕಟ್ಟೆ,ಹರೀಶ್ ಅಜ್ಜಿಬೆಟ್ಟು ಮತ್ತಿತರಿದ್ದರು. ಬಳಿಕ ಗ್ರಹಣ ಸಂದರ್ಭದಲ್ಲಿ ಸಾಮೂಹಿಕವಾಗಿ ಆಹಾರ ಸೇವನೆ ಮಾಡಲಾಯಿತು. ಸತೀಶ್ ಸ್ವಾಗತಿಸಿ,ವಂದಿಸಿದರು.


