ಬಂಟ್ವಾಳ: ಫೆ.6 ನಡೆಯುವ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯ ಪೂರ್ವಭಾವಿಯಾಗಿ ಇಂದು ಗೊನೆ ಮುಹೂರ್ತ ಮತ್ತು ಕೋಳಿಗುಂಟ ನಡೆಯಿತು.

ಸಂಪ್ರದಾಯದ ಪ್ರಕಾರ ಎಂಟು ದಿನಗಳ ಮುಂಚಿತವಾಗಿ ಶಾಸ್ತೋತ್ಸವದಂತೆ ಮಾಣಿ ಗುತ್ತುವಿನ ಹಾಗೂ ಅರೆಬೆಟ್ಟು ಗುತ್ತುವಿನ ಮನೆಯವರು ಆರ್ಚಕರು, ಗ್ರಾಮಸ್ಥರ ಸಮಕ್ಷಮದಲ್ಲಿ ಗೊನೆಕಡಿದು ಕೋಳಿಗುಂಟ ನಡೆಯಿತು.
ಫೆ. 3 ರಂದು ಹಾಳೆಗೆ ಹೋಗುವ ಸಂಪ್ರದಾಯ ನಡೆದ ಬಳಿಕ ಬಳಿಕ ಫೆ. 4 ರಂದು ಹಾಳೆ ಬಾಡಿಸುವ ಕಾರ್ಯಕ್ರಮ ದ ಬಳಿಕ ಫೆ.5 ರಂದು ರಾತ್ರಿ ಭಂಡಾರಏರಿ,ಫೆ. 6 ರಂದು ಬೆಳಿಗ್ಗೆ 9 ರಿಂದ ಕಾಲವಾಧಿ ಮೆಚ್ಚಿ ಜಾತ್ರೆ ನಡೆಯಲಿದೆ