Saturday, January 31, 2026

ಗೋಳ್ತಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ

ಬಂಟ್ವಾಳ: ಗೋಳ್ತಮಜಲು ಗ್ರಾಮ ಪಂಚಾಯತ್‌ನ ಅಮ್ಟೂರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ್ ಪೂಜಾರಿಯವರ ಅನುದಾನದ ವಿವಿಧ ಕಾಮಗಾರಿಗಳ ಉದ್ಘಾಟನೆ ಪಕ್ಷದ ಪ್ರಮುಖರು ಹಾಗೂ ಊರಿನ ಗಣ್ಯರ ಮೂಲಕ ನೆರವೇರಿತು.


ಪೊಯ್ಯಕಂಡದಲ್ಲಿನ ಕಾಂಕ್ರೀಟ್ ‌ರಸ್ತೆಯನ್ನು ಹಾಗೂ ಕೂಸಪ್ಪ ಮನೆಯ ಹಿಂಭಾಗದ ತಡೆಗೋಡೆಯನ್ನುವಿಟ್ಲ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು, ಸ್ಮಶಾನದ ಅಭಿವೃದ್ಧಿ ಕಾರ್ಯ, ವಿದ್ಯುದ್ದೀಪ, ನೀರಿನ ಟ್ಯಾಂಕ್ ಅನ್ನು ಕ.ರೈ.ಸೇ.ಸ.ಸಂ ಇದರ ನಿರ್ದೇಶಕ ಮಹಾಬಲ ಸಾಲ್ಯಾನ್, ಅನಿಲ್ ಮನೆಯಿಂದ ಹರೀಶ್ ಮನೆಯ ತನಕದ ಕಾಂಕ್ರೀಟ್‌ ರಸ್ತೆಯನ್ನು ಪ್ರಭಾಕರ ಶೆಟ್ಟಿ, ಕಾಂತು ನಲಿಕೆಯನವರ ಮನೆಯ ಮುಂಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಜಗದೀಶ ಬಜ್ಜಾರ್, ವಿಶಿಷ್ಟಚೇತನ ಅಶ್ವತ್ಥ್‌ನ ಮನೆ ಹತ್ತಿರ ತಡೆಗೋಡೆ ನಿರ್ಮಾಣದ ಗುದ್ದಲಿ ಪೂಜೆಯನ್ನು ಕೌಶಿಲ್ ಶೆಟ್ಟಿ, ತಾರಾನಾಥ ಮನೆಯವರೆಗಿನ ಕಾಂಕ್ರೀಟ್‌ ರಸ್ತೆಯನ್ನುತಾಲ್ಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ, ಕಟ್ಟೆಮಾರ್‌ನಿಂದ ನೆಲ್ಲಿಗುಡ್ಡೆಯವರೆಗಿನ ರಸ್ತೆಯನ್ನು ಮನೋಜ್ ‌ಕಟ್ಟೆಮಾರ್ ಹಾಗೂ ಪೊಯ್ಯಕಂಡದಲ್ಲಿನ ಪರಿಶಿಷ್ಟ ಜಾತಿ ಮನೆಯ ಮೇಲ್ಭಾಗದಲ್ಲಿ ಹಾದು ಹೋಗಿರುವ ಹೆಚ್.ಟಿ, ಎಲ್.ಟಿ ವಿದ್ಯುತ್ ‌ತಂತಿಯನ್ನು ತೆರವುಗೊಳಿಸಿರುವ ಕಾಮಗಾರಿಯನ್ನು ಮಹಾಬಲ ಕುಲಾಲ್‌ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಪೂವಳ, ಬೂತ್‌ ಅಧ್ಯಕ್ಷ ಶ್ರೀಧರ ಸುವರ್ಣ ಸುಬ್ಬಕೋಡಿ, ಶ್ರೀಕೃಷ್ಣ ಮಂದಿರದ ಅಧ್ಯಕ್ಷ ರಮೇಶ್‌ ಕರಿಂಗಾಣ, ಪ್ರಶಾಂತ್ ಬಜ್ಜಾರ್, ತಾರಾನಾಥ, ನಿತಿನ್‌ಕುಲಾಲ್, ಪೃಥ್ವಿ ಶಾಂತಿಪಲ್ಕೆ, ಮನೀಶ್ ಶಾಂತಿಪಲ್ಕೆ, ಮಹೇಶ್ ಶಾಂತಿಪಲ್ಕೆ, ನವೀನ್, ನಂದನ್‌ರೈ ಬಾಳಿಕೆ , ಕಿರಣ್ ನೆಲ್ಲಿಗುಡ್ಡೆ, ಕಾರ್ತಿಕ್, ವಿಖ್ಯಾತ್ ಶೆಟ್ಟಿ ಬಾಳಿಕೆ, ದಾಮೋದರ, ಹರೀಶ್ ಪೊಯ್ಯಕಂಡ, ಚರಣ್,ಲೋಕೇಶ್, ವಸಂತ,ಕೃಷ್ಣಪ್ಪ, ನೋಣಯ್ಯ, ದಿವಾಕರ, ನಾಗೇಶ್‌ರಾಯಪ್ಪಕೊಡಿ, ಸಂತೋಷ್, ಸಚಿನ್, ಜಿತೇಶ್ ಬಜ್ಜಾರ್ ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.
ಮಾಜಿ ತಾಲೂಕು ಪಂಚಾಯತ್‌ ಉಪಾಧ್ಯಕ್ಷ ದಿನೇಶ್‌ಅಮ್ಟೂರು ಸ್ವಾಗತಿಸಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಪೂಜಾರಿ ವಂದಿಸಿದರು.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...