ಹೆತ್ತವ್ವನೇ ನನ್ನ ಒಪ್ಪದಿರಲು ಮುಗಿಯಿತೆನ್ನ ಬದುಕು
ಹುಟ್ಟಿಸಿದ ತಂದೆಯ ಆಸೆ ನೀಗಲು ಮುಗಿಯಿತೆನ್ನ ಬದುಕು..


ಧರಣಿಯಿಂದ ಬಂದು ಭೂಮಿಗೇ ಹಿಂತಿರುಗಿರುವೆ,
ಅನಾಥ ನಾನು ಸರ್ವರಿರಲು, ಮುಗಿಯಿತೆನ್ನ ಬದುಕು…
ತಂಗಿ ತಮ್ಮನವರ ನೋಡುವ ಬಯಕೆಯಿಹುದು,
ಅಪ್ಪನ ಹೆಗಲೇರುವ ಅವಕಾಶವಿಲ್ಲ,ಮುಗಿಯಿತೆನ್ನ ಬದುಕು..
ಅಮ್ಮನ ಮಡಿಲಲ್ಲಿ ಮಲಗಿ ನಿದ್ರಿಸುವಾಸೆ
ಆಸೆಗಳ ಮುರುಟಿ ಬಿಸಾಕಿಹರಲ್ಲ, ಮುಗಿಯಿತೆನ್ನ ಬದುಕು..
ಅಗ್ನಿ ಜಲ ಆಕಾಶ ಭೂಮಿ ವಾಯು ಪಂಚ ದೈವಗಳಂತೆ
ಆ ದೇವತೆಗಳಿಗೆ ಆಹಾರವಾಗಿಹೆನಲ್ಲ, ಮುಗಿಯಿತೆನ್ನ ಬದುಕು..
ಮಾತೆ ಕೆಟ್ಟವಳಾಗಲು ಎನ್ನುವ ಮಾತಿದೆ ಜಗದೊಳು
ನನ್ನ ಬಾಳಲಿ ಗಾದೆ ಸುಳ್ಳಾಯಿತಲ್ಲ, ಮುಗಿಯಿತೆನ್ನ ಬದುಕು.
ಪ್ರೀತಿಯಲಿ ಬಾಳಬೇಕಾದ ಬದುಕು ಕಮರಿ ಹೋಯಿತು
ಪ್ರೇಮದಿ ಬದುಕಲಾಗಲಿಲ್ಲ, ಮುಗಿಯಿತೆನ್ನ ಬದುಕು..

@ಪ್ರೇಮ್@