ಬಂಟ್ವಾಳ: ಲೋಡೆಡ್ ಸಿಲಿಂಡರ್‌ಗಳಿದ ಖಾಲಿ ಸಿಲಿಂಡರ್‌ಗಳಿಗೆ ಗ್ಯಾಸ್ ತುಂಬಿಸಿ ಮಾರಾಟ ಮಾಡುತ್ತಿದ್ದ ದಂಧೆ ತಾಲೂಕಿನ ವಗ್ಗದ ಕವಳಪಡೂರು ಗ್ರಾಮದ ಅಲಂಪುರಿ ಗುಡ್ಡದಲ್ಲಿ ನಡೆಯುತ್ತಿದ್ದು ಇದನ್ನು ಗ್ರಾಮಸ್ಥರೇ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದು ಹರಿದಾಡುತ್ತಿದ್ದು, ಇದು ಅಲಂಪುರಿ ಗುಡ್ಡದಲ್ಲಿ ಖಾಲಿ ಸಿಲಿಂಡರ್‌ಗಳಿಗೆ ಲೋಡೆಡ್ ಸಿಲಿಂಡರ್‌ಗಳಿದ ಗ್ಯಾಸ್ ತುಂಬಿಸಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಗ್ರಾಮಸ್ಥರು ಪತ್ತೆ ಹಚ್ಚಿರುವುದಾಗಿ ದೂರಲಾಗಿದೆ.
ಗ್ಯಾಸ್ ಏಜೆನ್ಸಿಯೊಂದರ ಸಿಲಿಂಡರ್ ಡೆಲಿವರಿ ಮಾಡುತ್ತಿರುವ ಸಿಬ್ಬಂದಿಯೇ ಈ ದಂಧೆ ಮಾಡುತ್ತಿದ್ದರು ಎನ್ನಲಾಗಿದೆ. ಡೆಲಿವರಿ ಸಿಬ್ಬಂದಿಯಾದ ರಾಜಸ್ತಾನ ಮೂಲದ ಜಯಪ್ರಕಾಶ್ ಎಂಬಾತನನ್ನು ಸ್ಥಳೀಯರು ಹಿಡಿದಿದ್ದು ಈ ವೇಳೆ ರಾಮ್ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಹಿಂದೆಯೂ ಈ ಇಬ್ಬರು ಇಂಥದ್ದೇ ಕೃತ್ಯದಲ್ಲಿ ತೊಡಗಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇವರಿಬ್ಬರ ಅನುಮಾನಾಸ್ಪದ ವರ್ತನೆಯ ಮೇರೆಗೆ ಸ್ಥಳೀಯರು ಜಮಾಯಿಸಿ ದಂಧೆಯನ್ನು ಪತ್ತೆಹಚ್ಚಿ ಬಯಲಿಗೆಳೆದಿದ್ದಾರೆ ಎನ್ನಲಾಗಿದೆ.
ಪ್ರತೀ ಲೋಡ್ ಸಿಲಿಂಡರ್‌ನಿAದ ಸುಮಾರು ಒಂದರಿAದ ಎರಡು ಕೆ.ಜಿ. ಗ್ಯಾಸ್ ಬೇರೆ ಸಿಲಿಂಡರ್‌ಗಳಿಗೆ ತುಂಬಿಸಿ ಭರ್ತಿ ಮಾಡುತ್ತಿದ್ದರು. ಬಳಿಕ ತುಂಬಿಸಿದ ಸಿಲಿಂಡರ್ ಅನ್ನು ಯಾರಿಗಾದರೂ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಗ್ಯಾಸ್ ಏಜೆಂನ್ಸಿಗೆ ಸಂಬಧಿಸಿದವರು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
