ಆಂಧ್ರಪ್ರದೇಶ : ವಿಶಾಖಪಟ್ಟಣಂ ಹೊರವಲಯದ ಎಲ್ ಜಿ ಪಾಲಿಮರ್ಸ್ ಕಂಪನಿಯಲ್ಲಿ ವಿಷಾನಿಲ ಸೋರಿಕೆಯಾದ ಘಟನೆ ನಡೆದಿದೆ.
ಇದರಿಂದಾಗಿ 10 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.



ಅಲ್ಲಿನ ಗ್ರಾಮಸ್ಥರಲ್ಲಿ ಗಂಟಲು ಹಾಗೂ ಚರ್ಮದ ಸಮಸ್ಯೆ ಕಾಣಿಸಿಕೊಂಡಿದ್ದು, ಈವರೆಗೆ ಸುಮಾರು ಒಂದೂವರೆ ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಇದೇ ವೇಳೆ 800 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದುರ್ಘಟನೆಯಿಂದಾಗಿ 5 ಸಾವಿರ ಮಂದಿ ಅಸ್ವಸ್ಥರಾಗಿದ್ದಾರೆಂದು ಹೇಳಲಾಗುತ್ತಿದೆ. ವಿಶಾಖಪಟ್ಟಣಂನಲ್ಲೂ ಭಾರಿ ಆತಂಕ ಮನೆಮಾಡಿದ್ದು, ನಾಗರಿಕರಿಗೆ ಯಾರೂ ಮನೆಗಳಿಂದ ಹೊರಬರಬೇಡಿ, ಮೂಗು ಹಾಗೂ ಬಾಯಿಗೆ ಒದ್ದೆ ಬಟ್ಟೆಗಳನ್ನು ಕಟ್ಟಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ವಿಶಾಖಪಟ್ಟಣಂ ಮಾರ್ಗದ ಸಂಚಾರವನ್ನು ಬದಲಿಸಲಾಗಿದೆ.
ರಾಷ್ಟ್ರಪತಿ ರಮಾನಾಥ್ ಕೊವಿಂದ್ ಸಂತಾಪ ಸೂಚಿಸಿದ್ದು, ಅವರೆಲ್ಲ ಶೀಘ್ರ ಗುಣಮುಖರಾಗಲೆಂದು ಆಶಿಸಿದ್ದಾರೆ.
ಪ್ರಧಾನಿ ಮೋದಿಯಿಂದ ಪರಿಸ್ಥಿತಿ ಅವಲೋಕನ.ಗ್ಯಾಸ್ ಸೋರಿಕೆ












