Thursday, June 26, 2025

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿ ಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ದಿನಾಚರಣೆ

ಬೆಳ್ತಂಗಡಿ: ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಮಹಾತ್ಮಾ ಗಾಂಧೀಜಿ ಯವರ 153ನೇ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀ ಯವರ 117ನೇ ಜಯಂತಿಯ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾದ ಶೈಲೇಶ್ ಕುಮಾರ್ ಕರ್ತೋಡಿ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ದಲ್ಲಿ ಅವರು ಮಾತನಾಡುತ್ತ ಗಾಂಧೀಜಿ ಯವರ ಆದರ್ಶ ಹಾಗೂ ತತ್ವ ಗಳು ಇಂದಿನ ಪೀಳಿಗೆಗೆ ಅದರ ಅಗತ್ಯತೆ ಬಗ್ಗೆ ಸವಿಸ್ತಾರವಾಗಿ ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ಪಕ್ಷ ದ ಇನ್ನೊರ್ವ ಹಿರಿಯ ಮುಖಂಡ ರಾಜ್ಯ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪುರವರು ಮಾತನಾಡುತ್ತ ಅಹಿಂಸಾ ತತ್ವ ದಲ್ಲಿ ಗಾಂಧೀಜಿ ಇಟ್ಟ ನಂಬಿಕೆಗಳು ಹಾಗೂ ಹೋರಾಟ ದ ಬಗ್ಗೆ ವಿವರಿಸಿದರೆ. ದೇಶ ದ ಎರಡನೇ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀ ಯವರು ದೇಶ ಕ್ಕೆ ಕೊಟ್ಟ ಕೊಡುಗೆ, ಆಡಳಿತ ವೈಖರಿ, ಅವರು ಇಟ್ಟ ಸುಭದ್ರ ಅಡಿಪಾಯ ಮುಂದಿನ ಜನಾಂಗ ಪಾಲಿಸುವ ಮೂಲಕ ಸುಭದ್ರ ಭಾರತವನ್ನು ನಿರ್ಮಾಣ ಮಾಡಲು ಸಹಕಾರಿ ಆಗುತ್ತದೆ ಎಂದು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ಮತ್ತೋರ್ವ ಕಾಂಗ್ರೆಸ್ ಹಿರಿಯ ಮುಖಂಡ ಧರ್ಮಸೇನಾ ಬೆಳ್ತಂಗಡಿ ಮಾತನಾಡುತ್ತ ದೇಶ ಪ್ರಸಕ್ತ ಎದುರಿಸುತ್ತಿರುವ ಸಮಸ್ಯೆ ಹಾಗೂ ಇಂದಿನ ದಿನದಲ್ಲಿ ಗಾಂಧೀಜಿ ತತ್ವ ಅಗತ್ಯತೆ ಬಗ್ಗೆ ಸವಿಸ್ತಾರವಾಗಿ ಹೇಳಿದರು…..ಅಲ್ಲದೇ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುವ ಸುಳ್ಳು ಸುದ್ದಿ ಗಳು ಜನರನ್ನು ಹಿಂಸೆ ಗೆ ಪ್ರಚೋದನೆ ನೀಡುತ್ತೆ. ಅವುಗಳನ್ನು ನಿಗ್ರಹಿಸುವ ಅಗತ್ಯ ಅಧಿಕಾರಿ ವರ್ಗ ಮಾಡಬೇಕೆಂದು ಹೇಳಿದರು.. ಅಲ್ಲದೇ ಅಹಿಂಸೆ ಯೆ ನಮ್ಮ ಭಾರತೀಯತೆ ಗಾಂಧೀಜಿ ಅದರ ಮೇಲೆ ತಮ್ಮ ನಂಬಿಕೆ ಯನ್ನು ಗಟ್ಟಿಗೊಳಿಸಿದರು ಅಂತ ಹೇಳಿದರು.

ಕಾರ್ಯಕ್ರಮ ದಲ್ಲಿ ನಗರ ಪಂಚಾಯತ್ ಸದಸ್ಯ ಜಗದೀಶ್ ಡಿ, ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ದ ಅಧ್ಯಕ್ಷ ಸಲೀಂ ಗುರುವಾಯನಕೆರೆ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡ ಚಂದು ಎಲ್, ನಗರ ಕಾರ್ಮಿಕ ಘಟಕ ದ ಅಧ್ಯಕ್ಷ ಆರೀಶ್ ಪೆರಿಂಜೆ, ನಗರ ಪಂಚಾಯತ್ ಮಾಜಿ ಸದಸ್ಯ ಮೆಹಬೂಬ್, ಬೆಳ್ತಂಗಡಿ ನಗರ ಪಂಚಾಯತ್ ಹಾಲಿ ಸದಸ್ಯೆ ಮುಸ್ತಾಕ್ ಜಾನ್, ಬೆಳ್ತಂಗಡಿ ನಗರ ಪಂಚಾಯತ್ ಹಾಲಿ ಸದಸ್ಯ ಜನಾರ್ದನ್ ಕುಲಾಲ್,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಕಾಂಗ್ರೆಸ್ ಹಿಂದುಳಿದ ವರ್ಗದ ನಗರ ಅಧ್ಯಕ್ಷ ಸುಭಿತ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಕಮಿಟಿ ಯ ಸದಸ್ಯ ಪ್ರಭಾಕರ್ ಶಾಂತಿಗೋಡಿ, ಕಾಂಗ್ರೆಸ್ ಎಸ್. ಸಿ ಘಟಕ ದ ಗ್ರಾಮೀಣ ಅಧ್ಯಕ್ಷ ರವಿ ಇಂದಬೆಟ್ಟು, ಜೆರಾಲ್ಡ್ ಕೊರಯ ಮೊಡOತಿಯಾರು, ಸೌಮ್ಯ ಲಾಯಿಲ, ಮೊಹಮ್ಮದ್ ಆಲಿ ಲಾಯಿಲ, ಕಾಂಗ್ರೆಸ್ ಪಕ್ಷ ದ ಮುಖಂಡ ನಾರಾಯಣ ಪೂಜಾರಿ, ಹೈದರ್ ಆಲಿ ಕೊಲ್ಪೆದ ಬೈಲು, ನವೀನ್ ಕರಂಬಾರು, ಅವಿನಾಶ್ ಮೇಗಿನ ಕರ್ತೋಡಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.

ಕಾರ್ಯಕ್ರಮ ದ ಕೊನೆಯಲ್ಲಿ ಗಾಂಧೀಜಿ ವಿಚಾರ ಧಾರೆ ಯ ಬಗ್ಗೆ ಚಿಂತನ ಮಂತನ ನಡೆಯಿತು., ಕೊನೆಯಲ್ಲಿ ನಗರ ಪಂಚಾಯತ್ ಸದಸ್ಯ ಜಗದೀಶ್ ಡಿ ರವರು ವಂದನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಂಡಿತು.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...