ಬಂಟ್ವಾಳ : ದ ಕ ಜಿ ಪಂ ಹಿ ಪ್ರಾ ಶಾಲೆ ಬೋಳಂತೂರು ನರಿಕೊಂಬು, ರೀಚಲ್ ಚಾರಿಟೇಬಲ್ ಟ್ರಸ್ಟ್ (ರಿ) ತೊಕೊಟ್ಟು ಭಟ್ನಗರ ಹಾಗೂ ಲಯನ್ಸ್ ಕ್ಲಬ್ ಪೆರ್ಮನ್ನೂರು ಫೋಕಸ್ (ರಿ) ಇವರ ಜಂಟಿ ಆಶ್ರಯದೊಂದಿಗೆ ಗಾಂಧಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು sdmc ಅಧ್ಯಕ್ಷರು ಮೋಹನ್ ರವರು ವಹಿಸಿದ್ದರು. ಮುಖ್ಯಅತಿಥಿಗಳಾಗಿ ರೀಚಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ತೋಟಗಾರಿಕೆ ಇಲಾಖೆಯ ಸೆಕೆಂಡ್ ಡಿವಿಜನಲ್ ಅಧಿಕಾರಿಯಾದ ಸಿರಿಲ್ ರೊರ್ಬಟ್ ಡಿ ಸೋಜರವರುˌ ಅತಿಥಿಗಳಾಗಿ ಲಯನ್ಸ್ ಕ್ಲಬ್ ಪೆರ್ಮನ್ನೂರು ಫೋಕಸ್ (ರಿ) ಅಧ್ಯಕ್ಷರು ಲಯನ್ ಅರುಣ್ ಮೊಂತೆರೋ ˌ ಲಯನ್ ಆಸ್ಕರ್ ಡಿಸೋಜ. ಲಯನ್ ಗಿರೀಶ್ ಕೊಟ್ಟಾರಿ. ಲಯನ್ ಓಲ್ ವೆಟ್ ಡಿಸೋಜ ಹಾಗೂ ಮಾಜಿ kdp ಸದಸ್ಸರು ಉಮೇಶ್ ಬೋಳಂತೂರು ರವರು ವೇದಿಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .
ಷ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಮುಖ್ಯ ಶಿಕ್ಷಕಿ ಲೀನಾ ಐರಿನ್ ಗೋವಿಯಸ್ ಎಲ್ಲರನ್ನು ಸ್ವಾಗತಿಸಿದರು. ಸಿರಿಲ್ ರೊಬರ್ಟ್ ಡಿಸೋಜ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಒಂದೆರಡು ಮಾತುಗಳನ್ನಾಡಿ ಶುಭ ಹಾರೈಸಿದರು . ನಂತರ ಗಾಂಧೀಜಿಯವರˌ ಮತ್ತು ಲಾಲ್ ಬಹದ್ದೂರು ಶಾಸ್ತ್ರೀಯವರ ಭಾವಚಿತ್ರಕ್ಕೆ ಹೂ ಹಾಕಿ ಗೌರವಿಸಲಾಯಿತು.
ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ವಾಚನಾಲಯಕ್ಕೆ ಕಪಾಟು ಕೊಡುಗೆಯಾಗಿ ನೀಡಿದರು. ಲಯನ್ ಅರುಣ್ ಮೊಂತೆರೋ ಮಕ್ಕಳಿಗೆ ಶುಭ ಹಾರೈಸಿದರು. ಉಮೇಶ್ ಬೋಳಂತೂರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷರು ಮೋಹನ್ ರವರು ಗಾಂಧೀಜಿಯವರ ಅದರ್ಶ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳೋಣ ಎಂದು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗೀತಾ ಪಿ. ಸಹಶಿಕ್ಷಕಿ ಎಲ್ಲರನ್ನು ಆತ್ಮೀಯವಾಗಿ ವಂದಿಸಿದರು. ಪ್ರೆಸಿಲ್ಲಾ ಎವ್ಲಿನ್ ಡಿಸೋಜ ಸಹಶಿಕ್ಷಕಿ ಕಾರ್ಯಕ್ರಮ ನಿರೂಪಿಸಿದರು. sdmc ಅಂಗನವಾಡಿ ಕಾರ್ಯಕರ್ತೆ ˌ ಸಹಾಯಕಿ . ಹಾಗೂ sdmc ಸರ್ವ ಸದಸ್ಯರು ಹಾಗೂ ಪೋಷಕರು ಆಶಾಕಾರ್ಯಕರ್ತೆ ಸಹಕರಿಸಿದರು.

