ಬೆಳ್ತಂಗಡಿ : ಗಡಾಯಿಕಲ್ಲು, ಕಡಮಗುಂಡಿ, ಬೊಳ್ಳೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಜೂ.7ರಿಂದ ಎಂದಿನಂತೆ ಪ್ರವೇಶ ನೀಡಲು ಅನುಮತಿ ನೀಡಲಾಗಿದೆ. ಈ ಕುರಿತು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗ ಅನುಮತಿ ನೀಡಿದೆ.

ಮೇ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಕಾರಣ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ನದಿ ಹಳ್ಳಗಳು ಉಕ್ಕಿ ಹರಿದು ಒಳ ಹರಿವು ಜಾಸ್ತಿ ಇದ್ದುದರಿಂದ ಪ್ರವಾಸಿಗರ ಚಾರಣಕ್ಕೆ ಮೇ 31ರಂದು ಮುಂದಿನ ಗಡಾಯಿಕಲ್ಲು ಸೇರಿದಂತೆ ಕೆಲವು ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ ಮಾಡಿ ಆದೇಶ ಹೊರಡಿಸಲಾಗಿತ್ತು. ಇದೀಗ ಪ್ರವಾಸಿಗರಿಗೆ ಎಂದಿನಂತೆ ಪ್ರವೇಶ ನೀಡಲು ಅನುಮತಿ ನೀಡಲಾಗಿದೆ.

