ಬಂಟ್ವಾಳ : ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪರ್ಲಿಯ ಮನೆ ಬಿ. ಮೂಡ ಗ್ರಾಮದ ನಿವಾಸಿ ಅಮೀರ್ ಹುಸೈನ್ (45) ಎಂಬಾತನನ್ನು ಬಂಧಿಸಿದ್ದಾರೆ.


ಗ್ರಾಮಾಂತರ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ಎಂಬಾತನನ್ನು ದಸ್ತಗಿರಿ ಮಾಡಿ ಆತನ ಬಳಿಯಿದ್ದ 1 ಕೆ.ಜಿ 330 ಗ್ರಾಂ ಗಾಂಜಾವನ್ನು ವಶಪಡಿಸಲಾಗಿದೆ.
ವಶಪಡಿಸಿದ ಮಾದಕವಸ್ತುವಿನ ಒಟ್ಟು ಮೌಲ್ಯ ಅಂದಾಜು ರೂ 39,000/ ಆಗಬಹುದು. ಈತನು ಈ ಮಾದಕ ವಸ್ತುವನ್ನು ಮಂಗಳೂರು ಮೂಡುಶೆಡ್ಡೆಯ ಒರ್ವ ವ್ಯಕ್ತಿಯಿಂದ ಪಡೆದಿದ್ದಾಗಿ ತಿಳಿಸಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 8(c), 20 (B) (II) B NDPS ACT ಯಂತೆ ಪ್ರಕರಣ ದಾಖಲಾಗಿರುತ್ತದೆ.