ಉಜಿರೆ: ಧರ್ಮಸ್ಥಳದಲ್ಲಿ ಇದೇ ಏ.29 ರಂದು ಬುಧವಾರ ಸಂಜೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 49ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.
ವಧುವಿಗೆ ಸೀರೆ, ರವಿಕೆ ಕಣ ಮತ್ತು ಮಂಗಲ ಸೂತ್ರ ಹಾಗೂ ವರನಿಗೆ ಧೋತಿ, ಶಾಲು ನೀಡಲಾಗುವುದು. ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಇಚ್ಛಿಸುವವರು ಏಪ್ರಿಲ್ 25ರೊಳಗೆ ಸೂಕ್ತ ದಾಖಲೆ ಪತ್ರಗಳೊಂದಿಗೆ ಹೆಸರು ನೋಂದಾಯಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 08256-266644


