ವನ್ಯಜೀವಿ (ಸಂರಕ್ಷಣೆ-ಅಘೋಷಿತ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಅದ್ಯರ್ಪಿಸಲು ಅವಕಾಶ) ನಿಯಮಗಳು 2024 ರಡಿಯಲ್ಲಿ ನಿಯಮವು ಜಾರಿಯಾದ 90 ದಿನಗಳೊಳಗಾಗಿ ಅಂದರೆ ದಿನಾಂಕ : 11-04-2024 ರ ಒಳಗಾಗಿ ವನ್ಯಜೀವಿ/ವನ್ಯಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು (ಅಂದರೆ : ಹುಲಿ ಉಗುರು, ಹುಲಿ-ಚಿರತೆ-ಜಿಂಕೆ ಚರ್ಮ ಮತ್ತು ಹಲ್ಲು, ಆನೆ ದಂತ, ಜಿಂಕೆ ಕೊಂಬು, ಕಾಡುಕೋಣದ ಕೊಂಬು ಮತ್ತು ಇತರೆ ಯಾವುದೇ ಕಾಡುಪ್ರಾಣಿಯ ಯಾವುದೇ ಅಂಗಾಂಗಗಳು) ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಹೊಂದಿರುವ ಸಾರ್ವಜನಿಕರು ಮಾಲೀಕತ್ವ (ಲೈಸೆನ್ಸ್/ಅನುಮತಿ) ಧೃಡೀಕರಣ ಹೊಂದಿರದೇ ಇದ್ದಲ್ಲಿ ಅರಣ್ಯ ಇಲಾಖೆಗೆ ಆದ್ಯರ್ಪಿಸಲು (ತಲುಪಿಸಲು) ಅವಕಾಶ ಕಲ್ಪಿಸಲಾಗಿದೆ.

ಸದರಿ ವಸ್ತುಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಾದೇಶಿಕ/ವನ್ಯಜೀವಿ), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಾದೇಶಿಕ/ವನ್ಯಜೀವಿ), ವಲಯ ಅರಣ್ಯಾಧಿಕಾರಿಗಳು (ಪ್ರಾದೇಶಿಕ/ವನ್ಯಜೀವಿ) ಅಥವಾ ಪೊಲೀಸ್ ಠಾಣಾ ಮುಖ್ಯಸ್ಥರುಗಳಲ್ಲಿ ನಿಗದಿತ ನಮೂನೆ-1ನ್ನು ರೂ. 100/- ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿ ಅಫಿಡವಿಟ್ ಮುಖಾಂತರ ಅದ್ಯರ್ಪಿಸುವಂತೆ ಕೋರಿದೆ. ನಿಗದಿತ ದಿನಾಂಕದ ನಂತರ ಮಾಲಿಕತ್ವ ಪ್ರಮಾಣ ಪತ್ರವಿಲ್ಲದ ಎಲ್ಲಾ ವನ್ಯಜೀವಿ ವಸ್ತುಗಳು/ಟ್ರೋಫಿಗಳನ್ನು ಕಾನೂನು ಬಾಹಿರವೆಂದು ಪರಗಣಿಸಲಾಗುತ್ತದೆ ಮತ್ತು ಅಂತವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಲಯ ಅರಣ್ಯಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಲು ತಿಳಿಸಿದೆ.