ಮಂಗಳೂರು ವಿಭಾಗದ ಮಂಗಳೂರು ಉಪ ವಿಭಾಗ ಮಟ್ಟದಲ್ಲಿ ಮುಂಚೂಣಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳನ್ನು ಬೆಂಕಿಯಿಂದ ರಕ್ಷಿಸುವ ಬಗ್ಗೆ ಮಾಹಿತಿ ಕಾರ್ಯಾಗಾರ ರೋಟರಿ ಕ್ಲಬ್ ಬಿ.ಸಿ. ರೋಡ್ ಬಂಟ್ವಾಳ ದಲ್ಲಿ ನಡೆಯಿತು.

ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಕಾಂತ್ ರವರ ನೇತೃತ್ವದಲ್ಲಿ ಬಂಟ್ವಾಳದ ಅಗ್ನಿಶಾಮಕದಳದವರಿಂದ ಬೆಂಕಿ ನಂದಿಸುವ ಬಗ್ಗೆ ಮಾಹಿತಿಯನ್ನು ಸಿಬ್ಬಂದಿಯವರಿಗೆ ನೀಡಲಾಯಿತು.
ಬಳಿಕ ರೋಟರಿ ಕ್ಲಬ್ ನಲ್ಲಿ ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್.ಪಿ ಇವರ ಅದ್ಯಕ್ಷತೆಯಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರಕ್ಕೆ ಬೆಳ್ತಂಗಡಿ ವಲಯ, ಬಂಟ್ವಾಳ ವಲಯ, ಮಂಗಳೂರು ವಲಯ, ಉಪವಲಯ ಅರಣ್ಯಾಧಿಕಾರಿ, ಗಸ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ರೋಟರಿ ಅಧ್ಯಕ್ಷರಾದ ಪ್ರಕಾಶ್ ಬಾಳಿಗಾ, ರೋ|ರಿತೇಶ್ ಬಾಳಿಗಾ, ಪ್ರಫುಲ್ ಶೆಟ್ಟಿ.ಪಿ, ವಲಯ ಅರಣ್ಯಾಧಿಕಾರಿ ಬಂಟ್ವಾಳ, ರಾಜೇಶ್ ಬಳಿಗಾರ್ ವಲಯ ಅರಣ್ಯಾಧಿಕಾರಿ ಮಂಗಳೂರು, ಮೋಹನ್ ವಲಯ ಅರಣ್ಯಾಧಿಕಾರಿ ಬೆಳ್ತಂಗಡಿ ಹಾಜರಿದ್ದು, ಬೆಂಕಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಾಡಿನಲ್ಲಿ ಹರಡುವ ಬೆಂಕಿಯ ಬಗ್ಗೆ ಮತ್ತು ಅದನ್ನು ನಂದಿಸುವ ಬಗ್ಗೆ ಶ್ರೀಧರ್.ಪಿ ಸಿಬ್ಬಂದಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು. ಬಳಿಕ ಉರಗ ತಜ್ಞರಾದ ಸ್ನೇಕ್ ಕಿರಣ್ ಸಿಬ್ಬಂದಿಯವರಿಗೆ ಹಾವಿನ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಯಶೋಧರ.ಬಿ ಉಪ ವಲಯ ಅರಣ್ಯಾಧಿಕಾರಿ ಯವರು ನಡೆಸಿ ಕೊಟ್ಟರು.