ಮಂಗಳೂರು: ಕೊಲೆ, ಕೊಲೆಯತ್ನ ಸಹಿತ ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವ ಆಕಾಶಭವನ ಶರಣ್ ಜೈಲಿನಲ್ಲಿ ಇದ್ದುಕೊಂಡೇ ತನ್ನ ಸಹಚಾರರ ಮೂಲಕ ಮಂಗಳೂರಿನಲ್ಲಿ ಕೊಲೆಯೊಂದನ್ನು ನಡೆಸಲು ಸಂಚು ರೂಪಿಸಿದ್ದನ್ನು ವಿಫಲಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ, ಪ್ರಸ್ತುತ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಲ್ಲಿ ಇರುವ ಆಕಾಶಭವನ ಶರಣ್ ತನ್ನ ಎದುರಾಳಿಯಾದ ಮಂಗಳೂರಿನ ಪ್ರದೀಪ್ ಮಂಡನ್ ಅಥವಾ ಮಂಕಿಸ್ಟ್ಯಾಂಡ್ ವಿಜಯ್ ಅಥವಾ ಗೌರೀಶ್ ಅಥವಾ ಕೋಡಿಕೆರೆ ಮನೋಜ್ ಈ ನಾಲ್ವರಲ್ಲಿ ಯಾರಾದರೂ ಒಬ್ಬರನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದ ಎಂದು ತಿಳಿಸಿದ್ದಾರೆ.
ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ದರೋಡೆ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರಿಗೆ ದರೋಡೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಸಂಚು ಬೆಳಕಿಗೆ ಬಂದಿದೆ. ಆಕಾಶಭವನ ಶರಣ್ ಜೈಲಿನಲ್ಲಿ ಇದ್ದುಕೊಂಡೇ ತನ್ನ ಎದುರಾಳಿಯಾದ ಮಂಗಳೂರಿನ ಪ್ರದೀಪ್ ಮಂಡನ್ ಅಥವಾ ಮಂಕಿಸ್ಟ್ಯಾಂಡ್ ವಿಜಯ್ ಅಥವಾ ಗೌರೀಶ್ ಅಥವಾ ಕೋಡಿಕೆರೆ ಮನೋಜ್ ಈ ನಾಲ್ವರಲ್ಲಿ ಯಾರಾದರೂ ಒಬ್ಬರನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದಾನೆ. ಅದಕ್ಕಾಗಿಯೇ ಪೊಲೀಸ್ ವಶದಲ್ಲಿ ಇರುವ ಆತನ ಸಹಚಾರರು ಕೊಲೆ ಕೃತ್ಯ ಎಸಗಳು ದ್ವಿಚಕ್ರ ವಾಹನವೊಂದನ್ನು ಕಳವು ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿಚಾರಣೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿದರು.
