ಬಂಟ್ವಾಳ: ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸುತ್ತಾರೆ ಎಂದು ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ
ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಹೇಳಿದ್ದಾರೆ.
ಅವರು ಪರಂಗಿಪೇಟೆ ವಾರ್ಡ್ ಗಳಲ್ಲಿ ಮತಯಾಚನೆ ನಡೆಸಿದ ಬಳಿಕ ಮಾಧ್ಯಮ ವರ ಜೊತೆ ಮಾತನಾಡಿದರು.

ಪರಂಗಿಪೇಟೆ ಯ ಪ್ರತಿ ಮನೆಮನೆಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದು ಈ ಬಾರಿ ದ.ಕ.ಜಿಲ್ಲೆಯ ರಾಜಕೀಯ ಬದಲಾವಣೆ ನಿಶ್ಚಿತ ಎಂದು ಅವರು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ನಳಿನ್ ಕುಮಾರ್ ಕಟೀಲು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಯಾವುದೇ ಕೆಲಸ ಮಾಡದ ನಳಿನ್ ಕುಮಾರ್ ಅವರು ಮೋದಿಯವರ ಹೆಸರಿನಲ್ಲಿ ಮತಯಾಚನೆ ನಡೆಸುತ್ತಿದ್ದಾರೆ.
ಹಾಗಾಗಿ ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ, ಬದಲಾವಣೆ ನಿಶ್ಚಿತ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಪ್ರಮುಖರಾದ ಹಾಶೀರ್ ಪೆರಿಮಾರ್, ರಮ್ಲಾನ್ ಮಾರಿಪಳ್ಳ, ಆಶೀಕ್ ಇಕ್ಬಾಲ್, ಇಕ್ಬಾಲ್ ಸುಜೀರ್ , ಅಬ್ದುಲ್ ಸಮಾದ್ , ರಫೀಕ್ ಪೆರಿಮಾರ್ ಇಂಮ್ತಿಯಾಜ್ ತುಂಬೆ, ಮಜೀದ್ ಪೆರಿಮಾರ್, ಗಫೂರ್ ದುಬೈ, ರಿಯಾಜ್ ಕುಂಪಣಮಜಲು, ಲಿಡಿಯಾ ಪಿಂಟೋ, ಲಕ್ಮೀ, ಹೇಮಲತಾ, ಸುಜಾತ, ಮಹಮ್ಮದ್ ಮೋನು, ಜಾಹೀರ್, ಹುಸೈನ್ ಅಮ್ಮೆಮಾರ್, ಬಶೀರ್ ಅಮ್ಮೆಮಾರ್, ತೌಫೀಕ್ , ಸೌಕತ್ ಪಾಡಿ, ಮಹಮ್ಮದ್ ಎಂ.ಕೆ, ಇಸಾಮ್ ಪರಂಗಿಪೇಟೆ, ತೌಪೀಕ್ ಬಂದರ್,
ಸಲಾಂ ಮಲ್ಲಿ ಮತ್ತಿತರರು ಉಪಸ್ಥಿತರಿದ್ದರು.