ಬಂಟ್ವಾಳ: ಕಂದಾಯ ಇಲಾಖೆಯಲ್ಲಿ 35ವರ್ಷ 8 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಪ್ರಥಮ ದರ್ಜೆ ಸಹಾಯಕರಾಗಿ ನಿವೃತ್ತಿ ಹೊಂದಿದ ಕೆ. ಸೀತಾರಾಮ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಬಂಟ್ವಾಳ ತಾಲೂಕು ಕಚೇರಿ ಸಭಾಂಗಣದಲ್ಲಿ ಜರಗಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ತಹಶೀಲ್ದಾರ್ ರಶ್ಮಿ ಎಸ್. ಆರ್. ಅವರು ಕೆ. ಸೀತಾರಾಮ ಅವರ ಸರಳ ಸಜ್ಜನಿಕೆಯ ಕರ್ತವ್ಯ ನಿಷ್ಠೆಯನ್ನು ಕೊಂಡಾಡಿದರು.
ವೇದಿಕೆಯಲ್ಲಿ ಕೇಂದ್ರ ಸ್ಥಾನೀಯ ಉಪತಹಶೀಲ್ದಾರ ರಾಧಾಕೃಷ್ಣ, ಚುನಾವಣಾ ಶಿರಸ್ತೇದಾರ್ ರಾಜೇಶ್ ನಾಯ್ಕ್,ಭೂಮಿ ಶಿರಸ್ತೇದಾರ್ ಶ್ರೀಧರ್, ಆಹಾರ ಶಿರಸ್ತೇದಾರ್ ಶ್ರೀನಿವಾಸ, ವಿಟ್ಲಾ ನಾಡ ಕಚೇರಿ ಉಪತಹಶೀಲ್ದಾರ್ ರವಿಶಂಕರ್ ಉಪಸ್ಥಿತರಿದ್ದರು.
ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಸ್ವಾಗತಿಸಿ, ಗ್ರಾಮಲೆಕ್ಕಿಗಿ ಸ್ವಾತಿ ವಂದಿಸಿದರು. ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

