ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ (ರಿ) ಇವರ ಪ್ರಾಯೋಜಕತ್ವದಲ್ಲಿ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕಚೇರಿಗೆ ಅರ್ಜುನ್ ಪೂಂಜಾ ಇವರಿಂದ ಆವಿಷ್ಕಾರಗೊಂಡ ಪೆಡಲ್ ಸ್ಯಾನಿಟೈಝೆರ್ ಸಾಧನವನ್ನು ಸೇವಾಂಜಲಿ ಟ್ರಷ್ಟ್ ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಯು ಕೆ.ಕೆ.ಪೂಂಜಾ ಇವರ ಮುಂದಾಳತ್ವದಲ್ಲಿ ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಾಯತ್ರಿ ಬಾಯಿ ಹೆಚ್. ಇವರಿಗೆ ಇಂದು ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಪ್ರಶಾಂತ್, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಭಾರತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಸಂತ್ ಕೆ., ಮೇಲ್ವಿಚಾರಕಿಯರು ಮತ್ತು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

