ಉಪ್ಪಿನಂಗಡಿ: ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿಗೆ ಪಾಸಿಟಿವ್ ರಿಪೋರ್ಟ್ ಬಂದಿದೆ.

ಈತ ವೈಯಕ್ತಿಕ ಕೆಲಸದ ಹಿನ್ನೆಲೆ ದೆಹಲಿಗೆ ತೆರಳಿದ್ದ ಬಗ್ಗೆ ಮಾಹಿತಿಿ ಲಭ್ಯವಾಗಿತ್ತು.
ಅ ಬಳಿಕ ಮಾ.21ರಂದು ನಿಜಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಆಗಮನ ಮಾಡಿದ್ದ.
ಫೋನ್ ಟವರ್ ಲೊಕೇಶನ್ ಆಧಾರದಲ್ಲಿ ವ್ಯಕ್ತಿಯನ್ನು ಪತ್ತೆ ಮಾಡಿದ್ದ ಜಿಲ್ಲಾಡಳಿತ ಈ
ವ್ಯಕ್ತಿಯನ್ನ ಕ್ವಾರಂಟೈನ್ ಮಾಡಿ ಗಂಟಲ ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿತ್ತು.
ಇದೀಗ ಬಂದ ವರದಿಯಲ್ಲಿ ಯುವಕನಿಗೆ ಕೊರೋನಾ ಪಾಸಿಟಿವ್ ಎಂದು ಸಾಬೀತು ಅಗಿದೆ. ಎ.1ರಿಂದಲೇ ಮಂಗಳೂರಿನಲ್ಲಿ ಕ್ವಾರೆಂಟೈನ್ ನಲ್ಲಿರುವ ವ್ಯಕ್ತಿಯನ್ನು ಇರಿಸಲಾಗಿತ್ತು. ಮಾ.20ರಂದು ನಿಜಾಮುದ್ದೀನ್ ರೈಲಿನಲ್ಲಿ ಬಂದು ಮಾ.21ರಂದು ಮಂಗಳೂರಿಗೆ ಆಗಮನ ಮಾಡಿದ್ದ.
ನಿಝಾಮುದ್ದೀನ್ ಏರಿಯಾದ ಟವರ್ ಲೊಕೇಶನ್ ಆಧಾರದಲ್ಲಿ ಈ ವ್ಯಕ್ತಿ ಸೇರಿ 26 ಜನರನ್ನು ಮಂಗಳೂರಿನಲ್ಲಿ
ಕ್ವಾರಂಟೈನ್ ಮಾಡಲಾಗಿತ್ತು.
ತಬ್ಲೀಕ್ ಮಸೀದಿ ತೆರಳಿದ ಮತ್ತು ಆ ಪ್ರದೇಶದಲ್ಲಿ ಸುತ್ತಾಡಿದ ಜಿಲ್ಲೆಯ 26 ಮಂದಿ ಕ್ವಾರಂಟೈನ್ ಮಾಡಲಾಗಿತ್ತು
ಈತನ ಜೊತೆ ತೆರಳಿದ್ದ ತುಂಬೆ ಗ್ರಾಮದ ವ್ಯಕ್ತಿಗೆ ಎ.4ರಂದೇ ಕೊರೋನ ಪಾಸಿಟಿವ್ ಆಗಿತ್ತು.
ಆದರೆ ಈತನಿಗೆ ಮಾತ್ರ ಇಂದು ಪಾಸಿಟಿವ್ ರಿಪೋರ್ಟ್ ಬಂದಿದೆ.
ಸುಳ್ಳು ಸುದ್ದಿ
ಉಪ್ಪಿನಂಗಡಿ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಸೀಲ್ ಡೌನ್ ಎಂಬ ಸಂದೇಶಗಳನ್ನು ವ್ಯಾಟ್ಸಪ್ ಮೂಲಕ ಕಳುಹಿಸಲಾಗುತ್ತಿದ್ದು ಇದೊಂದು ಸುಳ್ಳು ಸುದ್ದಿ ಯಾಗಿದೆ.
ಈವರಗೆ ಜಿಲ್ಲಾಡಳಿತ ಯಾವುದೇ ಅದೇಶ ಮಾಡಿಲ್ಲ.
ಜಿಲ್ಲಾಡಳಿತ ದ ಅಧಿಕೃತವಾದ ಆದೇಶ ಬರುವವರೆಗೂ ಯಾರು ತಲೆಕೆಡಿಸಿಕೊಳ್ಳಬೇಕಾಗಿಲ್ಲ.

