Tuesday, February 3, 2026

ಸುಯೆಝ್ ಕಾಲುವೆಯಲ್ಲಿ ಸಿಕ್ಕಿಹಾಕೊಂಡ ಬೃಹತ್ ಹಡಗು: ಪ್ರಾಧಿಕಾರ ಬೇಡಿಕೆ ಇಟ್ಟ ಪರಿಹಾರ ಮೊತ್ತ ಎಷ್ಟು ಸಾವಿರ ಕೋಟಿ ಗೊತ್ತೆ?

ಈಜಿಪ್ಟ್: ಇತ್ತೀಚೆಗೆ ಸುಯೆಝ್ ಕಾಲುವೆಯಲ್ಲಿ ಸಿಕ್ಕಿಹಾಕೊಂಡ ಸರಕು ಸಾಗಣೆಯ ಬೃಹತ್ ‘ಎವರ್ ಗಿವನ್’ ಹಡಗಿನ ಮಾಲಕರಲ್ಲಿ ಸೂಯೆಝ್ ಕಾಲುವೆ ಪ್ರಾಧಿಕಾರ ಸಾವಿರಾರು ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.

900 ಮಿಲಿಯ ಡಾಲರ್ (6,760 ಕೋಟಿ ರೂ.) ಪರಿಹಾರ ನೀಡಬೇಕು. ಪರಿಹಾರ ನೀಡುವವರೆಗೆ ಹಡಗನ್ನು ಬಿಡುಗಡೆ ಮಾಡಲಾಗುವುದಿಲ್ಲ. ಇದಕ್ಕೆ ನ್ಯಾಯಾಲಯದ ಆದೇಶವೂ ಇದೆ ಎಂದು ಸುಯೆಝ್ ಕಾಲುವೆ ಪ್ರಾಧಿಕಾರದ ಅಧಿಕಾರಿಗಳು ಹಡಗಿನ ಕಂಪೆನಿಗೆ ಸೂಚಿಸಿದ್ದಾರೆ.

ಜಪಾನ್ ದೇಶದ ‘ಎವರ್ ಗಿವನ್’ ಕಂಪೆನಿಗೆ ಸೇರಿದ 2 ಲಕ್ಷ ಟನ್ ಭಾರದ ಈ ಬೃಹತ್ ಹಡಗು ಕಳೆದ ತಿಂಗಳ 23ರಂದು ಬಿರುಗಾಳಿಗೆ ಸಿಲುಕಿ ಸುಯೆಝ್ ಕಾಲುವೆಯಲ್ಲಿ ಅಡ್ಡಕ್ಕೆ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ ಈ ಕಾಲುವೆಯಲ್ಲಿ ಪ್ರತಿದಿನ ಯುರೋಪ್ ಮತ್ತು ಏಶ್ಯ ನಡುವೆ ಸಾಗುವ ನೂರಾರು ಹಡಗುಗಳ ಸಂಚಾರ ಸ್ಥಗಿತಗೊಂಡಿತ್ತು. ಒಂದು ವಾರದ ನಿರಂತರ ಪರಿಶ್ರಮದ ಬಳಿಕ ಹಡಗನ್ನು ಕಾಲುವೆಯಿಂದ ತೆರವುಗೊಳಿಸಲಾಯಿತು.

ಕಾಲುವೆಯಲ್ಲಿ ಹಡಗು ಬಾಕಿಯಾದ ಪರಿಣಾಮ ಪ್ರತಿದಿನ ಸುಮಾರು 72,130 ಕೋಟಿ ರೂ. ಮೌಲ್ಯದ ಸರಕು ಸಾಗಣೆ ಬಾಕಿಯಾಗಿತ್ತು. ಅಲ್ಲದೆ ಈ ಅವಧಿಯಲ್ಲಿ, ಕಾಲುವೆಯ ಬಳಕೆಗಾಗಿ ಈಜಿಪ್ಟ್‌ಗೆ ಪ್ರತಿ ದಿನ ಬರಬೇಕಾಗಿದ್ದ 90ರಿಂದ 113 ಕೋಟಿ ರೂಪಾಯಿ ವರಮಾನವೂ ನಷ್ಟವಾಗಿದೆ.

ಭಾರೀ ಮೊತ್ತದ ಪರಿಹಾರದ ಬಗ್ಗೆ ಈಜಿಪ್ಟ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಬಳಿಕ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಳಿಸಿ ಹಡಗನ್ನು ಬಿಡುಗಡೆಗೊಳಿಸಲಾಗುವುದು ಎಂದು ಹಡಗಿನ ಮಾಲಕರು ಹೇಳಿದ್ದಾಗಿ ವರದಿಯಾಗಿದೆ.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...