Tuesday, February 11, 2025

ಸಾಹಿತಿ ಏರ್ಯ ಇನ್ನಿಲ್ಲ

ಬಂಟ್ವಾಳ: ಹಿರಿಯ ಸಾಹಿತಿ ಏರ್ಯಲಕ್ಷೀನಾರಾಯಣ ಆಳ್ವ(94)ಅವರು ಹೃದಯಘಾತದಿಂದ ಇಂದು ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.

ಏರ್ಯಬೀಡು ಅವರ ಸ್ವಗೃಹದಲ್ಲಿ ಸಂಜೆಯ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಅಂಕಣಕಾರರಾಗಿ, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ,ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯಾಗಿ , ಸಾಹಿತ್ಯ ದಲ್ಲಿ ವಿಶೇಷ ಸಾಧನೆಗೈದ ಹಿರಿಯ ಚೇತನ ಲಕ್ಷೀನಾರಾಯಣ ಆಳ್ವ ಅವರು ಆರೋಗ್ಯವಾಗಿಯೇ ಇದ್ದರು.
ಸಂಜೆಯ ವೇಳೆ ಅವರು ಮನೆಯಲ್ಲಿದ್ದಾಗ ಇದ್ದ ಕ್ಕಿಂತೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆ ಗೆ ಕೊಂಡೊಯ್ಯಲಾಯಿತು. ಅದರೆ ಅವರು ಚಿಕಿತ್ಸೆ ಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾದರು ಎಂದು ಅವರು ಸಂಬಂಧಿಕರು ತಿಳಿಸಿದ್ದಾರೆ.

ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ನಿಕಟವರ್ತಿ ಯಾಗಿ ಅಲ್ಲಿನ ಎಲ್ಲಾ ಕಾರ್ಯಕ್ರಮ ಗಳಲ್ಲಿ ಇವರು ಭಾಗಿಯಾಗುತ್ತಿದ್ದರು.
ಬಂಟ್ವಾಳ ದಲ್ಲಿ ಏರ್ಯಲಕ್ಮೀನಾರಾಯಣ ಅಳ್ವ ಅವರ ನೇತ್ರತ್ವದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಗಳಲ್ಲಿ ಹೆಗ್ಗಡೆ ಯವರು ಪಾಲ್ಗೊಳ್ಳುತ್ತಿದ್ದರು.
ಏರ್ಯ ಅವರು ಪತ್ನಿ ಹಾಗೂ ಮಗಳು ಅಳಿಯ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗಣ್ಯರ ಸಂತಾಪ: ಹಿರಿಯ ಸಾಹಿತಿ ಏರ್ಯರ ಕೃತಿ ಜೀವನ ಎರಡು ಒಂದೇ ಅಗಿತ್ತು, ಇವರ ಅಗಲುವಿಕೆ ಜಿಲ್ಲೆಗೆ ದೊಡ್ಡ ನಷ್ಟವಾಗಿದೆ, ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿ ದವರು ಇವರು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರ್.ಎಸ್.ಎಸ್.ಪ್ರಮುಖ ಡಾ! ಪ್ರಭಾಕರ್ ಭಟ್,
ಮಾಜಿ ಸಚಿವ ರಮಾನಾಥ ರೈ , ಕಲಾವಿದ ಮಂಜುವಿಟ್ಲ, ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

More from the blog

ಕಾರು ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ: ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. ೯ರಂದು ನಡೆದಿದೆ. ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು....

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ...

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...