Monday, February 2, 2026

ಬಿಜೆಪಿ ಹಾಗೂ ಇರ್ವತ್ತೂರು ಹಾಲು ಉತ್ಪಾದಕರ ಸಂಘದ ವತಿಯಿಂದ ವಿವಿಧ ಬ್ಯಾಂಕ್ ಗಳಲ್ಲಿ ವಿವಿಧ ಯೋಜನೆಗಳ ಜಮೆಯಾದ ಹಣವನ್ನು ವಿಷ್ಣು ಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಫಲಾನುಭವಿಗಳಿಗೆ ವಿತರಣೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ‌ಇರ್ವತ್ತೂರು ಹಾಗೂ ಹಾಲೂ ಉತ್ಪಾದಕರ ಸಂಘ (ರಿ.) ಇರ್ವತ್ತೂರು ಇದರ ವತಿಯಿಂದ ಇರ್ವತ್ತೂರು ಗ್ರಾಮದ ನಾಗರೀಕರಿಗೆ ವಿಷ್ಣುಮೂರ್ತಿ ದೇವಸ್ಥಾನ‌ದ ಸತ್ಯನಾರಾಯಣ ಸಭಾಂಗಣದಲ್ಲಿ ಇಂದು ಕೊರನ ಎಂಬ‌‌ ಮಹಮಾರಿಯಿಂದ‌ ಇಡೀ ದೇಶವೇ ಲಾಕ್ ಡೌನ್,ಸಿಲ್ ಡೌನ್ ನಿಂದ ಬಡ ಜನರು ತಮ್ಮ ಖಾತೆಯಲ್ಲಿ ಹಾಕಿದ್ದ ಹಣ,ಇತರ‌ ಯೋಜನೆಗಳಿಂದ ಜಮೆಯಾದ ಹಣವನ್ನು ತೆಗೆಯಲು ಬ್ಯಾಂಕ್‌ ಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲದೇ ಹಾಗೂ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಈ ಸಮಸ್ಯೆಯನ್ನು ಮನಗಂಡು ಸಿಂಡಿಕೇಟ್ ಬ್ಯಾಂಕ್ ಇದರ ಸಹಯೋಗದೊಂದಿಗೆ ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ನ ಖಾತೆಗೆ ಜಮೆಯಾದ ಜನಧನ್,ಕಿಸಾನ್ ಸಮ್ಮನ್,ಉದ್ಯೋಗ ಖಾತರಿ,ಹಾಗೂ ಉಜ್ವಲ ಯೋಜನೆ,ಹಾಗೂ ಇನ್ನಿತರ ಯೋಜನಗಳ ಜಮೆಯಾದ ಹಣವನ್ನು ತೆಗೆದು‌ಕೊಡಲಾಯಿತು.

ಕಾರ್ಯಕ್ರಮವನ್ನು ಸಾಮಜಿಕ ಅಂತರ ಹಾಗೂ ಸಂಪೂರ್ಣ ಮಾಸ್ಕ್ ಧರಿಸಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ನ ಸಿಬ್ಬಂದಿಗಳಾದ ಹರೀಶ್ ಬಡಕಜೆಕಾರ್,ಸುಮತಿ ಬಡಕಜೆಕಾರ್,ಗಿರೀಶ್ ವಗ್ಗ, ಪಿಲಾತ್ತಬೆಟ್ಟು ಸಹಕಾರಿ ಸಂಘ,ಹಾಗೂ ಇರ್ವತ್ತೂರು ಹಾಲೂ ಉತ್ಪಾದಕ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಇರ್ವತ್ತೂರು ಗ್ರಾ.ಪಂ ಸದಸ್ಯ ದಯಾನಂದ್ ಕುಲಾಲ್ ಕಲ್ಲಡ್ಕ, ಇರ್ವತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಕುಮಾರ್ ಕುಂಟಜಾಲು,ಇರ್ವತ್ತೂರು ಹಾಲೂ ಉತ್ಪಾದಕ ಸಂಘದ ಕಾರ್ಯದರ್ಶಿ ಪದ್ಮನಾಭ ಕಲಾಬಾಗಿಲು,ಮೂಡುಪಡುಕೋಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ದಯಾನಂದ್ ಎಸ್,ಎರ್ಮೆನಾಡು, ಹಾಗೂ ಗಂಗಾಧರ್ ಶೆಟ್ಟಿ ಅರ್ಕೆದೊಟ್ಟು, ಉಪಸ್ಥಿತರಿದ್ದರು.

More from the blog

ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು. ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್...

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಸಂಸದ ಕ್ಯಾ. ಚೌಟ ಮನವಿ

ನವದೆಹಲಿ: ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ ('ಸಮುದ್ರ ತೀರದ ಪವನ ಶಕ್ತಿ' Offshore Wind Energy)...

ಅಂಗಡಿ, ಹೋಟೆಲ್ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ – ದರ್ಶನ್ ಎಚ್. ವಿ

ಮಂಗಳೂರು : ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿಗಳು ಹೋಟೇಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ...

Panemangaluru : ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರನಿಗೆ ಗಾಯ

ಬಂಟ್ವಾಳ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಸ್ಕೂಟರ್ ಸವಾರ ನರಿಕೊಂಬು ನಿವಾಸಿ ಮುಸ್ತಫಾ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಸ್ಕೂಟರ್ ಸವಾರ ಮುಸ್ತಫಾ ಅವರು ನರಿಕೊಂಬು ರಸ್ತೆಯಿಂದ...