ಬಂಟ್ವಾಳ: ಕೃಷಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುವ ಶ್ರೀ.ಕ್ಷೇ.ಧ.ಗ್ರಾ.ಯೋ.ಯು ದೇಶದ ಗಮನಸೆಳೆದಿದ್ದು,ಇದಕ್ಕೆ ಪೂರಕವಾದ ರೈತ ಕ್ಷೇತ್ರ ಪಾಠಶಾಲೆಯಿಂದ ರೈತರ ಜೀವನ ಪಾವನವಾಗಲಿ ಎಂದು ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಹಾರೈಸಿದ್ದಾರೆ. ಬಂಟ್ವಾಳ ತಾ.ನ ಇರಾ ಗ್ರಾಮದ ಭಾಸ್ಕರ ಬೆಳ್ಚಾಡ ಕುಂಡಾವು ಅವರ ಮನೆಯ ವಠಾರದಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋ.ಯಿಂದ “ರೈತ ಕ್ಷೇತ್ರ ಪಾಠಶಾಲೆ”ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಜನೆಯನ್ನು ಸದುಪಯೋಗಪಡೆಯುವಂತೆ ಮನವಿ ಮಾಡಿದರು. ಆರೋಗ್ಯಕ್ಕೆ ಹಾನಿಕಾರಕವಾದ ಮಾದಕ ವಸ್ತು ಸೇವನೆ ಸಹಿತ ದುಶ್ಚಟಗಳು ಮಾನವ ಕೂಡ ರ್ನಿಜೀವವಾಗುತ್ತದೆ ಎಂದ ಅವರು ಮಾನವ ದೇಶದ ಸಜೀವ ಸಂಪತ್ತು ಆಗಿದ್ದಾನೆ ಎಂದರು. ಎ.ಒಕ್ಕೂಟದ ಅಧ್ಯಕ್ಷ ಭಾಸ್ಕರ ಬೆಳ್ಚಾಡ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರಾದ ರಮೇಶ್ ನಗ್ರಿ,ನಿಶ್ಚಲ್ ಶೆಟ್ಟಿಕಲ್ಲಾಡಿ ಅವರು ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಿದ್ದರು.ಇದೇ ವೇಳೆ ರೈತರೊಂದಿಗೆ ಸಂವಾದ ನಡೆಯಿತು. ಎ.ಒಕ್ಕೂಟದ ಉಪಾಧ್ಯಕ್ಷ ರಮೇಶ್ ಶೆಟ್ಟಿ,ಸೇವಾ ಪ್ರತಿನಿಧಿ ಗಾಯತ್ರಿ ವೇದಿಕೆಯಲ್ಲಿದ್ದರು.


ಪ್ರಗತಿಬಂಧು ಸದಸ್ಯ ವಜ್ರಾಕ್ಷ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕಿ ನಂದಿತಾ ಪ್ರಸ್ತಾವಿಸಿದರು.ಒಕ್ಕೂಟದ ಅಧ್ಯಕ್ಷ ಜಯಪ್ರಕಾಶ್ ಕಾಜವ ಕೆಂಜಿಲ ವಂದಿಸಿದರು.ಸೇವಾ ನಿರತೆ ಕವಿತಾ ಕಾರ್ಯ ಕ್ರಮ ನಿರೂಪಿಸಿದರು.












