Tuesday, July 1, 2025

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು ಜಯಭೇರಿ‌ ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರು ಈ ಬಾರಿಯು ಮುಖಭಂಗ ಅನುಭವಿಸುದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಅರುಣ್ ,ಅರುಣ್ ಕುಮಾರ್ ಕೆ.,ಕಿರಣ್ ಕುಮಾರ್ ಎ., ಪ್ರೇಮನಾಥ ಬಂಟ್ವಾಳ,ಭೋಜ ಸಾಲಿಯಾನ್,ರಮೇಶ್ ಸಾಲಿಯಾನ್ ,ಸತೀಶ್, ರಮೇಶ್ ಸಾಲಿಯಾನ್ , ಸುರೇಶ್ ಕುಲಾಲ್ , ಸುರೇಶ್ ಕುಲಾಲ್ ಎನ್ ,ಹರೀಶ್, ಮಹಿಳಾ ಕ್ಷೇತ್ರದಿಂದ ಮಾಲತಿ ಮಚ್ಚೇಂದ್ರ ವಿದ್ಯಾ, ಹಿಂ. ವರ್ಗ ‘ಎ’ ಕ್ಷೇತ್ರದಿಂದ ಜನಾರ್ದನ ಬೊಂಡಾಲ, ಹಿಂ.ವರ್ಗ ‘ಬಿ’ಕ್ಷೇತ್ರದಿಂದ ಜಗನ್ನಿವಾಸ ಗೌಡ,ಪ. ಜಾ.ಕ್ಷೇತ್ರದಿಂದ ಗಣೇಶ್ ಸಮಗಾರ, ಪ. ಪಂ.ರೇಖಾ ನಾಯ್ಕ್  ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಬ್ಯಾಂಕಿನ ಹಾಲಿ‌ ಅಧ್ಯಕ್ಷ ಸುರೇಶ್ ಕುಲಾಲ್ ಬಂಟ್ವಾಳ ಇವರ ನೇತೃತ್ವದಲ್ಲಿ ಚುನಾವಣೆಯನ್ನು‌ ಎದುರಿಸಲಾಗಿದ್ದು, ಸಹಕಾರ ಭಾರತಿಯ ಅಭ್ಯರ್ಥಿಗಳು ವಿಪಕ್ಷ ಕಾಂಗ್ರೆಸ್ ಬೆಂಬಲಿತರ ಅಪಪ್ರಚಾರ,ಸುಳ್ಳು ಆರೋಪದ ನಡುವೆಯು ಮೂರನೇ ಅವಧಿಗೂ ಆಡಳಿತವನ್ನು ಉಳಿಸಿಕೊಳ್ಳುವಳ್ಳಿ ಯಶಸ್ವಿಯಾಗಿದೆ.

ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಚುನಾವಣೆ ನಡೆಯಿತು. ಪುತ್ತೂರು ತಾಲೂಕು ಸಹಕಾರಿ ಅಧಿಕಾರಿ‌ಯಾಗಿ ಅವರು ಚುನಾವಣಾಧಿಕಾರಿಯಾಗಿ ರಘ ಕಾರ್ಯ ನಿರ್ವಹಿಸಿದ್ದರು.

ಸಂಘದ ಸಿಒ ಬೋಜ‌ ಮೂಲ್ಯ ಹಾಗೂ ಸಿಬ್ಬಂದಿಗಳು‌ ಸಹಕರಿಸಿದ್ದರು.ವಿಜೇತ ಅಭ್ಯರ್ಥಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ‌,ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯನ್, ಕೋಶಾಧಿಕಾರಿ ದಿನೇಶ್ ಭಂಡಾರಿ ಮೊದಲಾದವರು ಅಭಿನಂದಿಸಿದ್ದಾರೆ.

More from the blog

Railway : ಇನ್ಮುಂದೆ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್‌ ಪಟ್ಟಿ ಬಿಡುಗಡೆ..

ಇನ್ನು ಮುಂದೆ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್‌ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಭಾರತೀಯ ರೈಲ್ವೇ ಇಲಾಖೆ ತಿಳಿಸಿದೆ. ಪ್ರಸ್ತುತ 4 ಗಂಟೆಯ ಮೊದಲು ರಿಸರ್ವೇಷನ್‌ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ...

ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ ಶಿಷ್ಯ ವರ್ಗವಾದ ಭಾಲಾವಲಿಕಾರ್ ಮತ್ತು ರಾಜಾಪುರ ಸಾರಸ್ವತ ಸಮಾಜದ ಬಾಂಧವರ ಮಹಾ ಸಭೆ

ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ ಶಿಷ್ಯ ವರ್ಗವಾದ ಭಾಲಾವಲಿಕಾರ್ ಮತ್ತು ರಾಜಾಪುರ ಸಾರಸ್ವತ ಸಮಾಜದ ಬಾಂಧವರ ವಿಷೇಶ ಮಹಾ ಸಭೆಯು, ಶ್ರೀ ಕೈವಲ್ಯ ಮಠ ಅನುಯಾಯಿಗಳ ಕ್ರಿಯಾ ಸಮಿತಿ ಮತ್ತು ಭಾಲಾವಲಿಕಾರ್/ರಾಜಾಪುರ...

Bantwal vijalakshmi: ಶ್ರೀನಾಥ್ ಪ್ರಭು ಇನ್ನಿಲ್ಲ

ಬಂಟ್ವಾಳ: ಬಿ.ಸಿ.ರೋಡಿನ ವಿಜಯಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲಕ ಮರಕಡ ಶ್ರೀನಾಥ್ ಪ್ರಭು(೭೦) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ. ೩೦ರಂದು ನಿಧನ ಹೊಂದಿದರು. ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು...

ವೆನ್ ಲಾಕ್ : ಹೊರವಲಯದಲ್ಲಿ ಜಮೀನು ಕಾದಿರಿಸಲು ಸಚಿವರ ಸೂಚನೆ..

ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಯ ಭವಿಷ್ಯದ ಅಭಿವೃದ್ದಿಯ ದ್ರಷ್ಟಿಯಿಂದ ನಗರದ ಕೇಂದ್ರಭಾಗದ ಹೊರವಲಯದಲ್ಲಿ ಜಮೀನು ಕಾದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಅವರು ಸೋಮವಾರ ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆ...