ಬಂಟ್ವಾಳ: ಸಜೀಪ ಮುನ್ನೂರು ಗ್ರಾ.ಪಂ.ಅತಂತ್ರ ಸ್ಥಿತಿಯಲ್ಲಿ ಫಲಿತಾಂಶ ನೀಡಿದೆ.

ಒಟ್ಟು 23 ಸ್ಥಾನಗಳ ಪೈಕಿ ಈ ಬಾರಿ ಪ್ರಥಮ ಬಾರಿಗೆ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನಗಳನ್ನು ಪಡೆಯುವುದರೊಂದಿಗೆ ಅಧಿಕಾರದ ಚುಕ್ಕಾಣಿ ಗೆ ಪ್ರಯತ್ನ ಪಡುತ್ತಿದ್ದಾರೆ.
ಬಿಜೆಪಿ ಬೆಂಬಲಿತ 11. ಸ್ಥಾನಗಳನ್ನು ಗಳಿಸಿದರೆ ಒಂದು ಸ್ವತಂತ್ರ ಅಭ್ಯರ್ಥಿ ಪಾಲಾಗಿದೆ.
ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳಾದ ಅಬ್ದುಲ್ ಸಮೀರ್, ಜಮಾಲುದ್ದೀನ್, ಇಮ್ರಾನ್ ಹೈವೆ, ಸಿದ್ದೀಕ್ ಚಿಕನ್, ಸಾಜಿದಾ, ವೈದಾ, ರಝಿಯಾಲತೀಫ್, ಸಾಜುದ್ದೀನ್, ಫೌಝಿಯಾ, ನವಿರಿನಾ, ಪೌಸಿಲ್ ಡಿ.ಸೋಜ
ಮತ್ತು ಬಿಜೆಪಿ ಬೆಂಬಲಿತರಾದ ಚಂದ್ರಕಲಾ, ಸಂದೀಪ್, ಗಣೇಶ್, ಅನಿತಾ, ನವೀನ್, ರಾಜೇಶ್, ಸುಮತಿ, ಪ್ರವೀಣ್, ದಯಾಲಕ್ಷ್ಮೀ , ಸುಂದರಪೂಜಾರಿ, ಸರೋಜಿನಿ ಹಾಗೂ ಸ್ವತಂತ್ರ ಅಭ್ಯರ್ಥಿ ಪದ್ಮನಾಭ ಭಂಡಾರಿ ಅವರು ವಿಜಯ ಗಳಿಸಿದ್ದಾರೆ.
