ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಇನ್ನೂ ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ ಈಗಲೇ ಚುನಾವಣೆಯ ಕುರಿತು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಚುನಾವಣಾ ಆಯೋಗವು ಮಾರ್ಚ್ 12ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 19ರಿಂದ ಚುನಾವಣೆ ನಡೆಯಲಿದೆ ಹಾಗೂ ಮೇ 22ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂಬಂತಹ ಸುದ್ದಿ ಹರಡಿದೆ. ಮಾರ್ಚ್ 28ರಂದು ಚುನಾವಣಾ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗದ ಹೆಸರಿನಲ್ಲಿ ನಕಲಿ ನೋಟಿಸ್ ಅನ್ನು ಸೃಷ್ಟಿಸಲಾಗಿದೆ.
https://x.com/ECISVEEP/status/1761278667940872538?s=20
2024ರ ಲೋಕಸಭೆ ಚುನಾವಣೆಯ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಾಟ್ಸಾಪ್‌ನಲ್ಲಿ ಸುಳ್ಳು ಸಂದೇಶ ಹರಡಲಾಗುತ್ತಿದೆ. ಈ ಸಂದೇಶವು ನಕಲಿ. ಚುನಾವಣಾ ಆಯೋಗವು ಈವರೆಗೂ ಯಾವುದೇ ದಿನಾಂಕ ಪ್ರಕಟಿಸಿಲ್ಲ. ಆಯೋಗವು ಸುದ್ದಿಗೋಷ್ಠಿ ಮೂಲಕ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ ಎಂದು ಆಯೋಗವು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ.