ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘ (ನಿ)ದ ಆಡಳಿತ ಮಂಡಳಿಗೆ ಸೋಮವಾರ ನಡೆದ ಸಭೆಯ ಚುನಾವಣೆಯಲ್ಲಿ ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ಅವರ ನೇತೃತ್ವದ 15ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಾಮಾನ್ಯ ಕ್ಷೇತ್ರದಿಂದ ರವೀಂದ್ರ ಕಂಬಳಿ, ಬಿ.ಟಿ. ನಾರಾಯಣ ಭಟ್, ರತ್ನಾ, ಶಶಿಕಲಾ ಉಡುಪ, ಸುಂದರ ಭಂಡಾರಿ, ಪದ್ಮನಾಭ ಕಿದೆಬೆಟ್ಟು, ರಾಮ ನಾಯ್ಕ, ಪೂವಪ್ಪ, ಸಹಕಾರ ಕ್ಷೇತ್ರದಿಂದ ರಾಜೇಶ್ ಶೆಟ್ಟಿ, ಮನೋರಾಜ್ ಎ., ಜ್ಞಾನೇಶ್ವರ ಪ್ರಭು, ಪಿ. ವೆಂಕಟೇಶ್ ನಾವುಡ, ರೋಹಿನಾಥ್ ಕೆ., ಉಮೇಶ್ ಪೂಜಾರಿ, ವೆಂಕಟ್ರಾಯ ಪ್ರಭು ಆಯ್ಕೆಯಾಗಿದ್ದಾರೆ. ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುದೀರ್ ಕುಮಾರ್ ಜೆ. ಅವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕಿಯೆ ನಡೆಸಿದರು.












