ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಅಂತಿಮವಾಗಿ 80.31 ಶೇ ಮತದಾನವಾಗಿದೆ.
ಒಟ್ಟು 222161 ಮತದಾರರಿದ್ದು ಅದರಲ್ಲಿ 178421 ಜನ ಮತದಾನ ಮಾಡಿದ್ದರು.
87142 ಪುರುಷ ಮತದಾರರು ಶೇ 79.69 ಮತದಾನ ಮಾಡಿದ್ದಾರೆ, 91279 ಮಹಿಳೆಯರು ಶೇ 80.91 ಮತದಾನ ಮಾಡಿದ್ದಾರೆ ಎಂದು ಎ.ಆರ್.ಒ.ಮಹೇಶ್ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೆಲವೊಂದು ಕಡೆಗಳಲ್ಲಿ ಇ.ವಿ.ಎಂ.ಯಂತ್ರಗಳು ಬೆಳಿಗ್ಗೆ ಹೊತ್ತಿನಲ್ಲಿ ಕೈಕೊಟ್ಟು ಮತದಾರರಿಗೆ ಸಮಸ್ಯೆ ಬಿಟ್ಟರೆ ಬಹುತೇಕ ಎಲ್ಲಾ ಕಡೆಗಳಲ್ಲಿ ಯೂ ಶಾಂತಿಯುತ ವಾಗಿ ಮತದಾನ ನಡೆದಿದ್ದು ಬಂಟ್ವಾಳ ತಾಲೂಕಿನ ಹಿರಿಮೆಯನ್ನು ಎತ್ತಿ ಹಿಡಿದಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತೊಂದರೆ ಗಳಾಗದೆ ಶಾಂತಿಯುತ ಮತದಾನಕ್ಕೆ ಶ್ರಮಿಸಿದ ಸಹಾಯಕ ಚುನಾವಣಾ ಅಧಿಕಾರಿ ಮಹೇಶ್ ಹಾಗೂ ಅವರ ತಂಡ ಮತ್ತು ಕಾನೂನು ಸುವ್ಯವಸ್ಥೆ ಯ ಮೂಲಕ ಶಾಂತಿಯುತ ಮತದಾನ ಅಗುವಂತೆ ಹಗಲಿರುಳು ಶ್ರಮಿಸಿದ ಬಂಟ್ವಾಳ ಉಪವಿಭಾಗ ದ ಎ.ಎಸ್. ಪಿ.ಸೈದುಲು ಅಡಾವತ್ ಮತ್ತು ಅವರ ತಂಡಕ್ಕೆ ಬಂಟ್ವಾಳ ಜನತೆಯ ಪರವಾಗಿ ವಿಶೇಷ ಅಭಿನಂದನೆಗಳು.