ಬಂಟ್ವಾಳ: ಎ.18 ರಂದು ನಡೆಯುವ ಲೋಕಸಭಾ ಚುನಾವಣೆ ಸಾಂಗವಾಗಿ ನಡೆಯುವ ಉದ್ದೇಶದಿಂದ 205 ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪೂರಕವಾದ ಕ್ರಮಗಳನ್ನು ಕೈಗೊಂಡಿದೆ ಎಂದು ಉಪ ಚುನಾವಣಾ ಅಧಿಕಾರಿ ಮಹೇಶ್ ತಿಳಿಸಿದರು.
ಅವರು ಮಂಗಳವಾರ ಮಿನಿವಿಧಾನಸೌಧದ ಚುನಾವಣಾ ಶಾಖೆಯಲ್ಲಿ ಮಾಧ್ಯಮ ವರ ಜೊತೆ ಮಾತನಾಡಿದ ವೇಳೆ ತಿಳಿಸಿದರು.

205 ಬಂಟ್ವಾಳ ವಿಧಾನಸಭಾ ಕ್ಷೇತ್ರದ ಲ್ಲಿ ಒಟ್ಟು 219702 ಮತದಾರರಿದ್ದಾರೆ.
ಅದರಲ್ಲಿ 108469 ಪುರುಷ ಹಾಗೂ 111233 ಮಹಿಳಾ ಮತದಾರರಿದ್ದಾರೆ.
ಒಟ್ಟು 249 ಮತಗಟ್ಟೆಗಳಿವೆ, 249 ಮತಗಟ್ಟೆಗಳ ವ್ಯಾಪ್ತಿಯಲ್ಲಿ 21 ಸೆಕ್ಟರ್ ಗಳಾಗಿ ವಿಂಗಡಿಸಲಾಗಿದೆ, 21 _ಸೆಕ್ಟರ್ ಗಳಿಗೆ ಆಫೀಸರ್ ಗಳನ್ನು ನೇಮಕ ಮಾಡಲಾಗಿದೆ.
13 ರಿಂದ 14 ಮತಗಟ್ಟೆಗಳಿಗುಣವಾಗಿ ಅಫೀಸರ್ ಗಳನ್ನು ವಿಂಗಡನೆ ಮಾಡಲಾಗಿದೆ.
ರಾಜಣ್ಣ ಅವರು ಮಾದರಿ ನೀತಿ ಸಂಹಿತೆ ಹಾಗೂ ಸ್ವೀಪ್ ನೊಡೆಲ್ ಅಧಿಕಾರಿ ಯಾಗಿ ನೇಮಕ ಮಾಡಲಾಗಿದೆ.
ಈಗಾಗಲೇ 21 ಸೆಕ್ಟರ್ ಜೊತೆಗೆ
3 ಹೋಬಳಿಗೆ ಒಂದರಂತೆ ಪ್ಲೇಯಿಂಗ್ ಸ್ಕಾಡ್ ಮಾಡಲಾಗಿದೆ.
ಒಂದೊಂದು ತಂಡದಲ್ಲಿ 9 ಜನ ಕೆಲಸ ಮಾಡುತ್ತಾರೆ.
ಒಬ್ಬರ ಲೀಡರ್ , ಕ್ಯಾಮರಾ ಮ್ಯಾನ್ ಹಾಗೂ ಪೋಲಿಸರು ಇರುತ್ತಾರೆ.
ಅವರಿಗೆ ವಾಹನ ನೀಡಲಾಗಿದೆ.
ಸಾರ್ವಜನಿಕ ರು ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾದರಿ ನೀತಿ ಸಂಹಿತೆ ದೂರುಗಳಿದ್ದರೆ ಅವರಿಗೆ ನೀಡ ಬಹುದು.
ವೀಡಿಯೋ ಸರ್ವೆಲೆನ್ಸಿ ಇದೆ , ಅನುಮತಿಸಿದ ಕಾರ್ಯಕ್ರಮ ಗಳಲ್ಲಿ ಎಲ್ಲಾ ದರೂ ನೀತಿ ಸಂಹಿತೆ ಉಲ್ಲಂಘನೆ ಅಗಿದಾ ಎಂದು ನೋಡುತ್ತಾರೆ.
ಬಂಟ್ವಾಳ ವ್ಯಾಪ್ತಿಯ ಕನ್ಯಾನದಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ ಅಲ್ಲೂ ಕೂಡ ಮೂರು ತಂಡಗಳನ್ನು ಮಾಡಿ ಅವರು ಕೆಲಸ ಮಾಡುತ್ತಾರೆ.
ಎಲ್ಲಾ ಕಡೆಯ ಅಧಿಕಾರಿಗಳ ನ್ನು ಒಂದೇ ಕಡೆ ಸಿಗುವ ರೀತಿಯಲ್ಲಿ ಸಿಗುವ ಉದ್ದೇಶದಿಂದ ಚುನವಣಾ ಶಾಖೆಯಲ್ಲಿ ವ್ಯವಸ್ಥೆ ಮಾಡಲಾಗಿದೆ . ಕಾರ್ಯಕ್ರಮ ಸಹಿತ ಇನ್ನಿತರ ಕೆಲಸಗಳಿಗೆ ಉಪಯೋಗುವ ನಿಟ್ಟಿನಲ್ಲಿ ಜನರು ಅಲೆದಾಡುವ ಕೆಲಸ ಆಗಬಾರದು ಎಂಬ ಉದ್ದೇಶದಿಂದ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ರಿಗೆ ಸುವಿದಾ ಹಾಗೂ ಆನ್ ಲೈನ್ ಗಳ ಮೂಲಕ ವೂ ಅರ್ಜಿಗಳನ್ನು ನೀಡಬಹುದು.
ಸಾರ್ವಜನಿಕ ರು ಮಾದರಿ ನೀತಿ ಸಂಹಿತೆಯ ದೂರು ನೀಡಲು ಸಿಟಿಜನ್ ವಿಜಿಲೆನ್ಸ್ ಎಂಬ ಆಪ್ ಡೌನ್ ಲೋಡ್ ಮಾಡಿ ಅ ಮೂಲಕ ವಿಡಿಯೋ ಅಥವಾ ಪೋಟೊ ಅಪ್ ಲೋಡ್ ಮಾಡಿದ ಬಳಿಕ ಕನಿಷ್ಠ 90 ನಿಮಿಷದೊಳಗೆ ಪ್ರಕರಣವನ್ನು ಪರೀಕ್ಷಿಸಿ ಕ್ರಮಗಳನ್ನು ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಸ್ಥಳೀಯ ವಾಗಿ _ತಾಲೂಕು ಕಚೇರಿಯಲ್ಲಿ 232500
ಕಂಟ್ರೋಲ್ ರೂಂ ಮಾಡಲಾಗಿದೆ.
ವಿ ಪ್ಯಾಟ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಪ್ರತ ಗ್ರಾಮ ಪಂಚಾಯತ್ ಗಳಲ್ಲೂ ಪ್ರಾತ್ಯಕ್ಷಿಕೆ ಮಾಡಲಾಗುತ್ತಿದೆ.
ಬಂಟ್ವಾಳ ತಾಲೂಕಿಗೆ ಒಳಪಡುವ ಪುತ್ತೂರು ಕ್ಷೇತ್ರದಲ್ಲಿ 61 ಮತಗಳಿವೆ.
ತಾಲೂಕಿನಲ್ಲಿ 249 ಬೂತ್ ಗಳಲ್ಲಿ 83
ಸೂಕ್ಷ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಸಣ್ಣರಂಗಯ್ಯ, ತಾ.ಪಂ.ಇಒ ರಾಜಣ್ಣ , ಏಕಗವಾಕ್ಷಿ ನೊಡೆಲ್ ಅಧಿಕಾರಿ ಲಕ್ಷಣ್ ಹೆಚ್.ಕೆ, ಸಹಾಯಕ ಚುನಾವಣಾ ಅಧಿಕಾರಿ ಆಪ್ತ ಸಹಾಯಕ ಶಿವಾನಂದ ಪೂಜಾರಿ ಇತರ ಅಧಿಕಾರಿಗಳು ಹಾಜರಿದ್ದರು.