ಬಂಟ್ವಾಳ: ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬ “ಈಸ್ಟರ್”ನ್ನು ಲೋರೆಟ್ಟೋ ಮಾತಾ ಚರ್ಚ್ ನಲ್ಲಿ ಬಹಳ ಭಕ್ತಿ, ಶ್ರದ್ಧೆ, ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರಧಾನ ಧರ್ಮ ಗುರುಗಳಾಗಿ ವಂ.ಜೋಕಿಮ್ ಡಿಸೋಜಾ ಅವರೊಂದಿಗೆ ವಂ. ದಿಲರಾಜ್, ವಂ.ಜೋಯೆಲ್, ಹಾಗೂ ಚರ್ಚ್ ಧರ್ಮ ಗುರುಗಳಾದ ವಂ.ಎಲಿಯಸ್ ಡಿಸೋಜಾ ರವರು ನೆರೆದಿದ್ದ ನೂರಾರು ಭಕ್ತಾದಿಗಳೊಂದಿಗೆ ಬಲಿಪೂಜೆ ಅರ್ಪಿಸಿದರು. ಬಲಿಪೂಜೆಗೆ ಹಾಜರಿದ್ದ ಭಕ್ತಾದಿಗಳಿಗೆ ತಂಪು ಪಾನೀಯ ಹಾಗೂ ಈಸ್ಟರ್ ಕೇಕ್ ವಿತರಿಸಲಾಯಿತು. ಪವಿತ್ರ ವಾರದ ಎಲ್ಲಾ ಪ್ರಾರ್ಥನಾ ವಿಧಿಯನ್ನು ಚರ್ಚ್ ಪಾಲನಾ ಮಂಡಳಿ ಮೆಲುಸ್ತುವರಿಯನ್ನು ವಹಿಸಿತ್ತು.