Saturday, July 12, 2025

ಪ್ರಾಚೀನ ವೈಶಿಷ್ಟ್ಯತೆ ದಾಖಲಿಸಲು ಶೋಧ ಪ್ರಜ್ಞೆ ಅಗತ್ಯ- ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತ

ಧರ್ಮಸ್ಥಳ: ಹೊಸ ಪೀಳಿಗೆಯ ಪ್ರತಿಭಾನ್ವಿತರು ಭಾರತದ ಪ್ರಾಚೀನ ಕಾಲದ ಇತಿಹಾಸ ಪ್ರತಿನಿಧಿಸುವ ಶಾಸನ, ಸ್ಥಳ ನಾಮ ಮತ್ತಿತರ ಪುರಾವೆಗಳನ್ನು ಸಂಗ್ರಹಿಸಿ ಭಾರತೀಯ ಜ್ಞಾನ ಪರಂಪರೆಗೆ ಕೊಡುಗೆಗಳನ್ನು ನೀಡುವ ಸಂಶೋಧನಾ ಪ್ರಜ್ಞೆ ಹೊಂದಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನುಡಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಧರ್ಮಸ್ಥಳದ ವಸಂತ್ ಮಹಲ್ ಸಭಾಭವನದಲ್ಲಿ ಏರ್ಪಟ್ಟ ಭಾರತೀಯ ಪುರಾಭಿಲೇಖ ಸಂಸ್ಥೆಯ 45ನೇ ವಾರ್ಷಿಕ ಅಧಿವೇಶನ ಮತ್ತು ಭಾರತೀಯ ಸ್ಥಳನಾಮ ಸಂಸ್ಥೆಯ 39ನೇ ವಾರ್ಷಿಕ ಸಮಾವೇಶದ ಎರಡು ದಿನಗಳ ಜಂಟಿ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಉಳಿದ ದೇಶಗಳಂತಲ್ಲ. ವಿದೇಶಗಳಿಗೆ ಅವುಗಳದ್ದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಭಾರತಕ್ಕೆ ಆ ಐತಿಹಾಸಿಕ ಹಿನ್ನೆಲೆಯ ಜೊತೆಗೆ ಪ್ರಾಚೀನ ಪರಂಪರೆಯ ಶ್ರೇಷ್ಠ ಮಾದರಿಗಳ ಇತಿಹಾಸವೂ ಇದೆ. ಈಗಾಗಲೇ ಆಗಿಹೋದ ವಿವರಗಳ ಜೊತೆಗೆ ಪ್ರಾಚೀನ ಪರಂಪರೆಯ ಮೌಲಿಕತೆಯನ್ನು ಬಿಂಬಿಸುವ ಹಾಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವಿವೇಚನಾತ್ಮಕ ಅಂಶಗಳ ಇತಿಹಾಸವನ್ನೂ ಭಾರತದಲ್ಲಿ ಕಾಣಬಹುದು. ವಿದ್ಯಾರ್ಥಿಗಳು ಈ ಪರಂಪರೆಯ ಒಳಗೇ ಇರುವ ಮಹತ್ವದ ಐತಿಹಾಸಿಕ ಅಂಶಗಳನ್ನು ಶೋಧಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಇತಿಹಾಸ, ಪ್ರಾಚೀನತೆ ಪ್ರತಿನಿಧಿಸುವ ವಸ್ತು, ವಿಚಾರಗಳನ್ನು ವರ್ತಮಾನದಲ್ಲಿ ಪ್ರಚುರಪಡಿಸುವುದರ ಹಿಂದೆ ಮೌಲಿಕ ಕಾರಣಗಳಿವೆ. ಸಂಗ್ರಹಿತ ವಸ್ತುಗಳ ಪ್ರದರ್ಶನ ಕೇವಲ ಪ್ರಚಾರದ ಉದ್ದೇಶಕ್ಕೆ ಮಾತ್ರವಲ್ಲ. ಬದಲಾಗಿ ಹಳೆಯದ್ದರ ಶ್ರೇಷ್ಠತೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಮಹತ್ವದ ಉದ್ದೇಶವೂ ಐತಿಹಾಸಿಕ ವಸ್ತುಪ್ರದರ್ಶನ ಕಾರ್ಯಕ್ರಮಗಳ ಹಿಂದಿರುತ್ತದೆ ಎಂದರು.
ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ದಾಖಲೀಕರಣ ಅಥವಾ ತಂತ್ರಜ್ಞಾನದ ಸಹಾಯವಿಲ್ಲದೇ ಜ್ಞಾನ-ವಿಜ್ಞಾನದ ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗಳಿಗೆ ದಾಟಿಕೊಂಡವು. ಇದೀಗ ಹಳೆಯದ್ದರ ದಾಖಲೀಕರಣಕ್ಕೆ ತಂತ್ರಜ್ಞಾನದ ನೆರವಿದೆ. ವಿದ್ಯಾರ್ಥಿಗಳು ಈ ಆಯಾಮ ಪರಿಗಣಿಸಿ ಐತಿಹಾಸಿಕ, ಪ್ರಾಚೀನ ಅಂಶಗಳನ್ನು ಶೋಧಿಸುವ ಉತ್ಸಾಹ ತೋರಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಕಟಿತವಾದ ವಿಶೇಷ ಸಂಚಿಕೆಗಳನ್ನು ಎಸ್.ಡಿ.ಎಂ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರ ಬಿಡುಗಡೆಗೊಳಿಸಿದರು. ಭಾರತೀಯ ಪುರಾಭಿಲೇಖ ಸಂಸ್ಥೆಯ ವತಿಯಿಂದ ಡಾ.ಡಿ ವೀರೇಂದ್ರ ಹೆಗ್ಗಡೆ, ಡಾ.ಬಿ ಯಶೋವರ್ಮ ಹಾಗೂ ಡಾ. ಸತೀಶ್ಚಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ಪುರಾಭಿಲೇಖ ಸಂಸ್ಥೆಯ ಅಧ್ಯಕ್ಷ ಡಾ.ಟಿ.ಎಸ್‌. ರವಿಶಂಕರ್, ಉಪಾಧ್ಯಕ್ಷ ಪಿ.ಎನ್. ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಜೈಪ್ರಕಾಶ್ ಹಾಗೂ ಭಾರತೀಯ ಸ್ಥಳನಾಮ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಕೃಷೇಂದುರೇ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸತೀಶ್ಚಂದ್ರ ಸ್ವಾಗತಿಸಿ, ಟಿ.ಎಸ್‌.ರವಿಶಂಕರ್ ವಂದಿಸಿದರು. ಸೂರ್ಯನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.

More from the blog

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ : ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ನಿರ್ದೇಶನ..

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ‌ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ...