.

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಅಂಗವಾಗಿ 1947 ರ ಅಗೋಸ್ತು 14 ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ ಕಳೆದುಹೋದ ಭಾಗಗಳೆಲ್ಲವನ್ನು ಮತ್ತೆ ಒಂದೂಗೂಡಿಸುವುದಕ್ಕಾಗಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಬಿಸಿರೋಡಿನ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿ ಮಾತನಾಡಿದ ಬಂಟ್ಬಾಳ ತಿರುಮಲ ವೆಂಕಟರಮಣ ದೇವಸ್ಥಾನ ದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ
ರಾಷ್ಟ್ರ ಭಕ್ತರಿಗೆ ಯೋಧರಿಗೆ ಅವಮಾನಗಳು ಅಗುತ್ತಿವೆ ಇದು ವಿಷಾದನೀಯ, ಇದರ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿದಾಗ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಜಾತಿ ಮತ ಮರೆತು ನಾವೆಲ್ಲರೂ ಹಿಂದೂ ಎಂಬುದು ಸಾಕಾರವಾಗಬೇಕಾಗಿದೆ ಎಂದರು.
ರಾಷ್ಟ್ರ ಭಕ್ತಿಯ ಕಾರ್ಯಕ್ರಮ ವನ್ನು ಮಾಡುತ್ತಿರುವ ಸಂಘಟನೆಗೆ ಅಭಿನಂದನೆಗಳು
ಪ್ರಧಾನ ಭಾಷಣ ಮಾಡಿದ ಸತ್ಯಜಿತ್ ಸುರತ್ಕಲ್ ಅವರು
ನೂರಾರು ಹೋರಾಟದ ಪರಿಣಾಮವಾಗಿ ನೆಮ್ಮದಿ ಶಾಂತಿ ಯಿಂದ ಬದುಕುತ್ತಿದ್ದೇವೆ.
ಧರ್ಮ , ಸಂಸ್ಕ್ರತಿ ಉಳಿದರೆ ಮಾತ್ರ ಈ ದೇಶ ಸಂಪತ್ಬರಿತವಾಗಿ ಮೆರೆಯಲು ಸಾಧ್ಯ ಎಂದು ಅವರು ಹೇಳಿದರು.
ಸಿಕ್ಕ ಸ್ವಾತಂತ್ರ್ಯ ವನ್ನು ಉಳಿಸುವ ಬಹಳ ದೊಡ್ಡ ಜವಬ್ದಾರಿ ನಮ್ಮ ಮೇಲಿದೆ, ಅದನ್ನು ಅರಿತುಕೊಂಡು ನಾವು ಬದುಕಬೇಕಾಗಿದೆ ಎಂದು ಅವರು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಮನ್ನಥ್ ಶೆಟ್ಟಿ ಪುತ್ತೂರು ಅವರುಭಾರತ ಅಖಂಡವಾಗಬೇಕು ಎಂಬ ಆಸೆ ಇದ್ದರೆ ಅದು ಹಿಂದೂಗಳಿಗೆ ಮಾತ್ರ. ಇತಿಹಾಸದಲ್ಲಿ ಕೆಲವೊಂದು ಸತ್ಯ ವಿಚಾರಗಳನ್ನು ಮರೆಮಾಚಲಾಗಿದೆ.
ಭಾರತವನ್ನು ನಿಷ್ಠಾವಂತ ಆಳುತ್ತಿದ್ದಾನೆ ಎಂದರೆ ಭಾರತದ ಅಖಂಡವಾಗುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು.
ಕಾಶ್ಮೀರದಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಶ್ಲಾಘನೀಯ,
ಭಾರತ ಬದಲಾವಣೆ ಅಗುತ್ತಿದೆ,
ನಿಜವಾದ ಗೌರವ ಸೈನಿಕರಿಗೆ ಸಿಕ್ಕಿದೆ ಎಂದರೆ ಅದು ಮೋದಿಯವರಿಂದ.
ಏಕತೆಗೆ ಧಕ್ಕೆಯುಂಟಾದಾಗ ಹೋರಾಟವನ್ನು ಮಾಡಿಯೇ ಸಿದ್ದ ಎಂದು ಅವರು ಹೇಳಿದರು.
ಈದ್ಗಾ ಮೈದಾನದ ಘಟನೆಗೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮತ್ತು ಈದ್ಗಾ ಮೈದಾನದ ಹೋರಾಟದ ಮುಂಚೂಣಿಯ ಲ್ಲಿದ್ದ ಸತ್ಯಜಿತ್ ಸುರತ್ಕಲ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಿಭಾಗ ಕಾರ್ಯದರ್ಶಿ ರವಿರಾಜ್ ಬಿಸಿರೋಡು, ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ವಿಶ್ವಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಸುರೇಶ್ ಬೆಂಜನಪದವು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ಕ್ಕೆ ಮುನ್ನ ಸಂಜೆ ಬಿಸಿರೋಡಿನ ಕೈ ಕಂಬ ದ ಪೊಳಲಿ ದ್ವಾರದ ಬಳಿಯಿಂದ ಹೊರಟು ಬಿಸಿರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತವಾಗಿ ತಾಲೂಕು ಕಛೇರಿ ಯ ಮುಂಭಾಗದವರೆಗೆ ಪಂಜಿನ ಮೆರವಣಿಗೆ ನಡೆಯಿತು.
ಕಿರಣ್ ಶೆಟ್ಟಿ ಸ್ವಾಗತಿಸಿ, ಅಕ್ಷಯ್ ಕಾಮಾಜೆ ವಂದಿಸಿದರು.