ಉಜಿರೆ: ಶ್ರೀ ಧ. ಮಂ. ಕಾಲೇಜಿನ ಹಳೆವಿದ್ಯಾರ್ಥಿ ರಕ್ಷಿತ್ ಅ. ಪ. (ಅಪರ ಉಜಿರೆ) ಇವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ವಿವಿಯ ಕನ್ನಡ ಭಾಷಾಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಪಿ. ಮಹಾದೇವಯ್ಯ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ’ದಕ್ಷಿಣ ಕನ್ನಡ ಪರಿಸರದ ಕನ್ನಡ ಕಲಿಕೆಯ ಸಮಸ್ಯೆಗಳು’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಜೂ.23ರಂದು ಮೌಖಿಕ ಪರೀಕ್ಷೆ ನಡೆಸಿ ಪಿಎಚ್.ಡಿ ಪದವಿ ಪದವಿ ನೀಡಿದೆ.


