ಬಂಟ್ವಾಳ: .ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವ ತಯಾರಿ ಸಿದ್ದತೆ ಮಾಜಿ ಸಚಿವ ಬಿ. ರಮಾನಾಥ ರೈಯವರ ಮಾರ್ಗದರ್ಶನದಲ್ಲಿ ಸಂಗಬೆಟ್ಟು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಮ್ತಾಡಿ, ಅರಳ, ಸಂಗಬೆಟ್ಟು, ರಾಯಿ, ಪಂಜೀಕಲ್ಲು, ಪಿಲಾತ್ ಬೆಟ್ಟು, ಇರ್ವತ್ತೂರು, ಚೆನ್ನೈತೋಡಿ, ಕುಕ್ಕಿಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮ ಶೇಖರ ಜೈನ್, ಚಂದ್ರ ಪ್ರಕಾಶ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ವಲಯ ಅಧ್ಯಕ್ಷ ಚಂದ್ರಶೇಕರ ಶೆಟ್ಟಿ, ವಲೇರಿಯನ್, ದಿನೇಶ್ ಶೆಟ್ಟಿಗಾರ್, ಸುಧೀರ್ ಶೆಟ್ಟಿ, ಸದಾನಂದ ಶೆಟ್ಟಿ, ಪ್ರಶಾಂತ್ ಜೈನ್, ನವೀನ್ ಶೆಟ್ಟಿ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

