ಬಂಟ್ವಾಳ: ಸಚಿವ ಡಿ.ಕೆ.ಶಿವಕುಮಾರ್ ಅವರು ಪರಂಗಿಪೇಟೆ ಯಲ್ಲಿ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ಕುಮಾರ್ ರೈ ಪರವಾಗಿ ಮತಯಾಚಿಸಿದರು.
ಜಿಲ್ಲೆಯ ಕಾರ್ಯಕ್ರಮ ವೊಂದರಲ್ಲಿ ಭಾಗಿಯಾಗಿ ಸುಳ್ಯ ದಿಂದ ಮಂಗಳೂರಿಗೆ ವಾಪಾಸು ಹೋಗುವ ವೇಳೆ ದಾರಿ ಮಧ್ಯೆ ಪರಂಗಿಪೇಟೆ ಯಲ್ಲಿ ಕ್ಷಣ ಮಾತ್ರ ಮಿಥುನ್ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಸಚಿವ ಯು.ಟಿ.ಖಾದರ್, ಮಾಜಿ.ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಪ್ರಮುಖರಾದ ರಮ್ಲಾನ್ ಮಾರಿಪಳ್ಳ,
ಹಾಶೀರ್ ಪೆರಿಮಾರ್ ಮತ್ತಿತರರು ಹಾಜರಿದ್ದರು

