Saturday, June 28, 2025

ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಗೆ ವಿಶೇಷ ಕಾಳಜಿ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಬಂಟ್ವಾಳ ಶಾಸಕರ ರೂ .50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಗ್ರಿ ಭಜನಾ ಮಂದಿರದ ಬಳಿ ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೇರಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿ, ಸರಕಾರದ ಅನುದಾನಗಳ ಮೂಲಕ ಗ್ರಾಮದ ಎಲ್ಲಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಗೆ ಮೊದಲ ಆಧ್ಯತೆ ನೀಡಲಾಗುತ್ತದೆ ‌ಎಂದರು.

ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿಗೆ ಗ್ರಾಮಸ್ಥರ ಒಗ್ಗಟ್ಟಿನ ಸಹಕಾರ ಸದಾ ಇರಲಿ ಎಂದು ಹೇಳಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಅವರು ಮಾತನಾಡಿ ಯುವ ಸಮುದಾಯದ ಸಹಕಾರ ಮನೋಭಾವ ಹಾಗೂ ಕ್ರಿಯಾಶೀಲ ಕೆಲಸ ಧಾರ್ಮಿಕ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಅವರು ಹೇಳಿದರು.

ಕ್ಷೇತ್ರ ಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿದ ಹೆಗ್ಗಳಿಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತದೆ.

ಬಿಜೆಪಿ ಅಧ್ಯಕ್ಷ ಪೂಜಾರಿ,ಅವರು ಮುಖ್ಯ ಅತಿಥಿಯಾಗಿ ಶುಭಹಾರೈಸಿದರು. ಶ್ರೀಶಾರದ ಭಜನಾ ಮಂದಿರದ ಆದ್ಯಕ್ಷ ರತ್ನಾಕರ್ ನಾಡಾರ್, ಅವರು ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು.

ವೇದಿಕೆಯಲ್ಲಿ ಗ್ರಾ.ಪಂ‌, ಅದ್ಯಕ್ಷೆ ಹರಿಣಾಕ್ಷಿ,ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ ಸಜೀಪ,ಸಂಜೀವ ಪೂಜಾರಿ,

ಯುವಕ ಮಂಡಲದ ಅಧ್ಯಕ್ಷ ಸುಂದರ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಅಗಲಿಬೆಟ್ಟು, ಪ್ರಶಾಂತ್ ಪೂಜಾರಿ ವಿಟ್ಲುಕೋಡಿ, ಸುಂದರಿ, ಶೋಭಾ ಶೆಟ್ಟಿ, ವಿಶ್ವನಾಥ ಬೆಳ್ಚಾಡ, ಆಶೋಕ್, ಕುಶಾಲಕ್ಷ, ಸೋಮನಾಥ ಬಂಗೇರ,

ಪ್ರಮುಖ ರಾದ ಯಶವಂತ ದೇರಾಜೆ, ಸುರೇಶ್ ಪೂಜಾರಿ ಸಾರ್ಥವ, ಆನಂದ ಶಂಭೂರು, ಯಶೋಧರ ಕರ್ಬೆಟ್ಟು, ಶಿವಪ್ರಸಾದ್ ಶೆಟ್ಟಿ, ಗಣಪತಿ ಭಟ್ ಕೋಮಾಲಿ, ಉದಯಕುಮಾರ್ ಕಾಂಜಿಲ, ಶೋಬಿತ್ ಪೂಂಜ, ಸುಂದರ ಪೂಜಾರಿ, ಶೈಲೇಶ್ ಪೂಜಾರಿ, ಮೋಹನ್ ದಾಸ್ ಮತ್ತಿತರ ಊರ ಗಣ್ಯರು ಹಾಗೂ

ಭಜನಾ ಮಂಡಳಿ ಸರ್ವಸದಸ್ಯರು ಉಪಸ್ಥಿತರಿದ್ದರು.

ಸಮುದಾಯ ಭವನಕ್ಕೆ ಶ್ರಮಿಸಿದ ಯಶವಂತ ನಾಯ್ಕ ನಗ್ರಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಶ್ರೀಶಾರದ ಭಜನಾ ಮಂದಿರದ ಆದ್ಯಕ್ಷ ರತ್ನಾಕರ್ ನಾಡಾರ್ ಸ್ವಾಗತಿಸಿದರು. ಶಾರದ ಯುವಕ ಮಂಡಲದ ಅಧ್ಯಕ್ಷ ಸುಂದರ ಕುಲಾಲ್ ವಂದಿಸಿದರು.

ಸುರೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

More from the blog

Farewell : ಬೀಳ್ಕೊಡುಗೆ ಸಮಾರಂಭ..

ಕೊಯಿಲ : ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 14 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ಗೈದು, ನಿವೃತ್ತಿ ಹೊಂದಿರುವ ಶ್ರೀ. ರಮೇಶ್ ಮಯ್ಯ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿ 14 ವರ್ಷ ಕರ್ತವ್ಯ...

ಅಂಚೆ ಗ್ರಾಹಕರಿಗೆ ಗುಡ್ ನ್ಯೂಸ್ : ಪೋಸ್ಟ್ ಆಫೀಸ್ ಗಳಲ್ಲಿ ಇನ್ನುಂದೆ ಡಿಜಿಟಲ್ ಪಾವತಿ ಶುರು!

ಭಾರತೀಯ ಪೋಸ್ಟ್ ಇಲಾಖೆ ಆಧುನಿಕ ತಂತ್ರಜ್ಞಾನದೊಂದಿಗೆ ಜನರಿಗೆ ವೇಗದ, ಸುರಕ್ಷಿತ ಸೇವೆಗಳನ್ನು ಒದಗಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿ, ಆಗಸ್ಟ್‌ನಿಂದ ದೇಶಾದ್ಯಂತ ಪೋಸ್ಟ್ ಆಫೀಸ್‌ಗಳಲ್ಲಿ UPI ಮೂಲಕ ಪಾವತಿ ಸೌಲಭ್ಯ ಜಾರಿಗೆ...

Police Hat : ರಾಜ್ಯದ ಪೊಲೀಸ್ ಪೇದೆಗಳಿಗೆ ಹೊಸ ಟೋಪಿ..!  

ರಾಜ್ಯದ ಪೊಲೀಸ್ ಹಾಗೂ ಮುಖ್ಯ ಪೇದೆಗಳ ಟೋಪಿಯಲ್ಲಿ ಬದಲಾವಣೆಯಾಗಲಿದೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣ ಪೊಲೀಸರು ಬಳಸುವ...

ಸರಕಾರಿ ಹಿ. ಪ್ರಾ. ಶಾಲೆ ಕೆಮ್ಮಾನುಪಲ್ಕೆ : ಶಾಲಾ ಮಂತ್ರಿಮಂಡಲ ಪ್ರಮಾಣವಚನ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಸರಕಾರಿ ಹಿ ಪ್ರಾ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ ಮಂತ್ರಿಗಳಿಗೆ ಪ್ರಮಾಣವಚನ ವನ್ನು ಶಾಲಾ ಮುಖ್ಯ ಶಿಕ್ಷಕ ಉದಯಕುಮಾರ್...