ಬಂಟ್ವಾಳ: ಧರ್ಮಸ್ಥಳ ಪೋಲೀಸ್ ಠಾಣೆಗೆ ಎಸ್.ಐ.ಆಗಿ ಕೃಷ್ಣಕಾಂತ್ ಪಾಟೀಲ್ ಅವರು ಕರ್ತವ್ಯ ಕ್ಕೆ ಶುಕ್ರವಾರ ರಾತ್ರಿ ಹಾಜರಾಗಿದ್ದಾರೆ.

ಎಸ್.ಐ.ಪವನ್ ಕುಮಾರ್ ಅವರ ವರ್ಗಾವಣೆಗೊಂಡ ಬಳಿಕ ಖಾಲಿಯಾಗಿದ್ದ ಸ್ಥಾನಕ್ಕೆ ಪ್ರೋಬೆಷನರಿ ಎಸ್.ಐ.ಆಗಿ ಕರ್ತವ್ಯ ದಲ್ಲಿದ್ದ ಕೃಷ್ಣಕಾಂತ್ ಅವರನ್ನು ಧರ್ಮಸ್ಥಳ ಠಾಣೆಗೆ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಮೂಲತಃ ಬಾಗಲಕೋಟ ಜಿಲ್ಲೆಯ ಜಮಖಂಡಿ ಯವರಾದ ಕೃಷಕಾಂತ್ ಪಾಟೀಲ್ ಅವರು
ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ, ಹಾಗೂ ವಿಟ್ಲ ಠಾಣೆಯಲ್ಲಿ ಪ್ರೊಬೇಷನರಿ ಹುದ್ದೆ ಯಲ್ಲಿದ್ದರು.
ಪ್ರಸ್ತುತ ಧರ್ಮಸ್ಥಳ ಪೋಲೀಸ್ ಠಾಣೆಗೆ ಕರ್ತವ್ಯ ಕ್ಕೆ ಹಾಜರಾಗಿದ್ದು ಇದು ಅವರ ಪ್ರಥಮ ಪೋಲೀಸ್ ಠಾಣೆಯಾಗಿದೆ.
