ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೀರಿನ ಕೊರತೆಯನ್ನು ಗಮನಿಸಿದ ಬೆಂಗಳೂರಿನ ಬಸವನಗುಡಿ ಸುಂಕೇನಹಳ್ಳಿಯ ಭಕ್ತಾದಿಗಳು ಸೋಮವಾರರಾತ್ರಿ 6,780 ಲೀಟರ್‌ಕುಡಿಯುವ ನೀರನ್ನು ಕೊಡುಗೆಯಾಗಿ ನೀಡಿದರು.



339 ಕ್ಯಾನ್‌ಗಳಲ್ಲಿ ತಲಾ 20 ಲೀಟರ್‌ನಂತೆಒಟ್ಟು 6,780 ಲೀ ನೀರನ್ನುಅವರು ತಮ್ಮ ವಾಹನಗಳಲ್ಲಿ ಸೋಮವಾರ ರಾತ್ರಿ ತಂದುಕೊಟ್ಟರು.
ಅನ್ನಪೂರ್ಣಛತ್ರದಲ್ಲಿ ಅಕ್ಕಿ ಬೇಯಿಸಲು ಹಾಗೂ ಭಕ್ತಾದಿಗಳಿಗೆ ಕುಡಿಯಲು ಈ ನೀರನ್ನು ಬಳಸಲಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿ. ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.