Tuesday, February 11, 2025

ಧರ್ಮಸ್ಥಳದಲ್ಲಿ ನಿಖಿಲ್ ಕುಮಾರಸ್ವಾಮಿ: ಚುನಾವಣೆಯಲ್ಲಿ ಗೆದ್ದು ಮಂಡ್ಯದ ಜನರ ಋಣ ತೀರಿಸುತ್ತೇನೆ.

ಉಜಿರೆ: ಜೆ.ಡಿ.ಎಸ್. ಪಕ್ಷದ ವರಿಷ್ಠರ ತೀರ್ಮಾನಕ್ಕೆ ತಾನು ಬದ್ದನಾಗಿದ್ದೇನೆ ಹಾಗೂ ಸಿದ್ದನಾಗಿದ್ದೇನೆ. ಅವರೇ ನನಗೆ ಸ್ಪೂರ್ತಿಯ ಸೆಲೆ ಹಾಗೂ ಮಾರ್ಗದರ್ಶಕರು. ಅವರು ತನಗೆ ಕೊಟ್ಟ ಜವಾಬ್ದಾರಿಯಿಂದ, ಸಮರ್ಪಕವಾಗಿ ನಿರ್ವಹಿಸುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದು ಕೊನೆ ಉಸಿರಿನ ವರೆಗೂ ಮಂಡ್ಯದ ಜನರ ಸೇವೆ ಮಾಡಿ ಋಣ ತೀರಿಸುತ್ತೇನೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ತನಗೆ ಗೆಲುವು ಖಚಿತ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆ ಬಗ್ಗೆ ಪ್ರಸ್ತಾಪಿಸಿದಾಗ ಈ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಧರ್ಮಸ್ಥಳ ಭೇಟಿಯ ಉದ್ದೇಶ: ಶಿವ ನಮ್ಮ ಮನೆ ದೇವರು. ಪ್ರತಿ ವರ್ಷ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಹೆಗ್ಗಡೆಯವರ ಆಶೀರ್ವಾದ ಪಡೆಯುತ್ತೇನೆ.
ಸೋಮವಾರ ಹಾಗೂ ಶಿವರಾತ್ರಿ ಸಂದರ್ಭವಾದುದರಿಂದ ದೇವರ ದರ್ಶನ ಮಾಡಿ ರಾಜ್ಯದಲ್ಲಿ ಜನರು ಸುಖ-ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ. ಮಳೆ-ಬೆಳೆ ಚೆನ್ನಾಗಿ ಆಗಿ ರೈತರು ಸದಾ ಸಂತೋಷದಿಂದ ಬದುಕುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ನಿಖಿಲ್ ಕುಮಾರ ಸ್ವಾಮಿ ಹೇಳಿದರು.

More from the blog

ಬ್ಲಡ್ ಕ್ಯಾನ್ಸರ್ ಗೆ ಪೋಲಿಸ್ ಸಿಬ್ಬಂದಿ ಬಲಿ

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೋಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ. ಅವಿವಾಹಿತನಾಗಿದ್ದ ಅಭಿಷೇಕ್...

ಬಳ್ಳಮಂಜ ಕೈಲಾ ಧರ್ಮಚಾವಡಿ, ಬುನ್ನಾನ್ ಕುಟುಂಬಸ್ಥರ ತರವಾಡಿನ ನೂತನ ಮನೆಯ ಶಿಲಾನ್ಯಾಸ

ಬೆಳ್ತಂಗಡಿ : ಕಲ್ಲುರ್ಟಿ ಪಂಜುರ್ಲಿ ಮೈಸಂದಾಯ ಬನ್ನಾನ್ ಕುಟುಂಬಸ್ಥರ ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ.)ಕೈಲಾ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಕೈಲಾಧರ್ಮ ಚಾವಡಿ ಮತ್ತು ತರವಾಡುಮನೆಯ ಶೀಲಾನ್ಯಾಸ ಕಾರ್ಯಕ್ರಮ ಫೆ.9ರಂದು...

ಮನೆಗೆ ಬೆಂಕಿ

ಬಡಕಬೈಲ್: ಗೋಣಿ ಚೀಲ ವ್ಯಾಪಾರಿ ಮೋನಾಕ ಎಂಬವರ ಮನೆಗೆ ಆಕಸ್ಮಿಕಾ ಬೆಂಕಿ ಅನಾಹುತ. ಯಾವುದೇ ಸಾವು-ನೋವು ಸಂಭವಿಸಿಲ್ಲ. ತಡರಾತ್ರಿ ಘಟನೆ ಬೆಂಕಿ‌ ನಂದಿಸಲು ಅಗ್ನಿ ಶಾಮಕದಳ ಹರಸಾಹಸ ಶಾರ್ಟ್ ಸರ್ಕ್ಯೂಟ್ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು...

ಕಾರು ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ: ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. ೯ರಂದು ನಡೆದಿದೆ. ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು....