Wednesday, February 12, 2025

ವಿದ್ಯುತ್ ತಂತಿ ತುಳಿದು ತಂದೆ ಮಗಳು ಮೃತ್ಯು

ಬಂಟ್ವಾಳ: ತೋಟದಲ್ಲಿ ಮುರಿದು ಬಿದ್ದಿದ್ದ ತಂತಿಯನ್ನು ಆಕಸ್ಮಿಕವಾಗಿ ತುಳಿದು ತಂದೆ, ಮಗಳು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಬಾರಕಿನಡಿ ಎಂಬಲ್ಲಿ ಮಂಗಳವಾರ ಸಂಭವಿಸಿದೆ.

ಮೃತರನ್ನು ಬಾರಕಿನಡಿ ನಿವಾಸಿಗಳಾದ ಗೋಪಾಲಕೃಷ್ಣ ಶೆಟ್ಟಿ (೬೩), ಇವರ ಮಗಳು ದಿವ್ಯಾಶ್ರಿ (೨೦) ಮೃತಪಟ್ಟವರು ಎಂದು ತಿಳಿದುಬಂದಿದೆ.
ಘಟನೆ:
ಮಂಗಳವಾರ ಸಂಜೆ ತಂದೆ ಮಗಳೊಂದಿಗೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದರು. ಈ ವೇಳೆ ತೋಟದಲ್ಲಿ ಮುರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕ ತುಳಿದು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹಳೆಯದಾದ ತಂತಿಗಳನ್ನು ಮೆಸ್ಕಾಂ ಇಲಾಖೆ ಬದಲಿಸದೆ ಇರುವುದು ಈ ಘಟನಗೆ ಮೂಲ ಕಾರಣವೆಂದು ಸ್ಥಳೀಯ ರು ಆಕ್ರೋಶ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಬಂಟ್ವಾಳ ತಹಶಿಲ್ದಾರರಾದ ರಶ್ಮೀ,

ಉಪತಹಶೀಲ್ದಾರ್ ರಾಜೇಶ್ ನಾಯ್ಕ್
ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ,ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡ, ಎಸ್ಸೈ ಸುಧಾಕರ ತೋನ್ಸೆ, ಸಿಬ್ಬಂದಿಗಳಾದ ಸುರೇಶ್, ವರ್ಗೀಸ್, ಜಯರಾಮ, ಜನಾರ್ದನ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೋಪಾಲಕೃಷ್ಣ ಅವರು ಚೆನ್ನೈತ್ಯೋಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದು, ದಿವ್ಯಾಶ್ರೀ ಅವರು ಹುಟ್ಟು ವಿಕಲಾಂಗ ಯುವತಿ.

 

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...