ಬಂಟ್ವಾಳ, ಆ. ೪: ಶಂಕಿತ ಡೆಂಗ್ ಜ್ವರಕ್ಕೆ ಬಂಟ್ವಾಳದ ವ್ಯಕ್ತಿಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ತಲಪಾಡಿ ಸಮೀಪದ ಪೊನ್ನೋಡಿ ನಿವಾಸಿ, ದಿ. ಬಾಲನ್ ಎಂಬವರ ಪುತ್ರ ಪ್ರಶಾಂತ್ ಯಾನೆ ಪಚ್ಚು ಪೊನ್ನೋಡಿ (೩೯) ಮೃತಪಟ್ಟವರು.
ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಪ್ರಶಾಂತ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಶಂಕಿತ ಡೆಂಗ್ ಬಾಧಿಸಿರುವ ಬಗ್ಗೆ ತಿಳಿದುಬಂದಿದೆ.
ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ದಿ.ಬಾಲನ್ ಮತ್ತು ದಿ.ಸರೋಜಿನಿ ದಂಪತಿಯ ನಾಲ್ವರು ಪುತ್ರರ ಪೈಕಿ ಪ್ರಶಾಂತ್ ಮೂರನೇಯವರು.
ಅವಿವಾಹಿತರಾಗಿರುವ ಇವರು ತನ್ನ ಲಾರಿಯಲ್ಲಿ ಡ್ರೈವರ್ ಆಗಿ ದುಡಿಯುದ್ದಿದ್ದರು.
ಮೃತರು ಇಬ್ಬರು ಸಹೋದರಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.
