Wednesday, January 28, 2026

ಸ್ನಾನಕ್ಕೆ ತೆರಳಿದ ವ್ಯಕ್ತಿ ನೇತ್ರಾವತಿ ನದಿಗೆ ಬಿದ್ದು ಸಾವು

ಬಂಟ್ವಾಳ: ಸ್ನಾನಕ್ಕೆಂದು ತೆರಳಿದ ವ್ಯಕ್ತಿ ಯೋರ್ವರು  ಆಕಸ್ಮಿಕವಾಗಿ  ನೀರಿನಲ್ಲಿ ಮುಳುಗಿ  ಮೃತಪಟ್ಟಿರುವ ಘಟನೆ ಬಂಟ್ವಾಳ ಬಿ.ಮೂಡ ಗ್ರಾಮದ ಕಂಚಿಕಾರ್ ಪೇಟೆಯಲ್ಲಿ ನಡೆದಿದೆ.
 
ಬಂಟ್ವಾಳ ಬೈಪಾಸ್ ನಿವಾಸಿ ಅವಿವಾಹಿತ  ಪ್ರವೀಣ್( 37) ಅವರು ಮೃತಪಟ್ಟ ವ್ಯಕ್ತಿ. ಪ್ರವೀಣ್ ಅವರು ಮರದ ಕೆಲಸ  ಮಾಡುತ್ತಿದ್ದ ಇವರು ನೇತ್ರಾವತಿ ನದಿಗೆ ಸ್ನಾನಕ್ಕಾಗಿ ಹೋಗಿದ್ದರು.
ಆದರೆ ಸ್ನಾನಕ್ಕೆ ಹೋದವರು ವಾಪಾಸು ಬರದೆ ಇದ್ದು ಹುಡುಕಾಡಿದಾಗ ಕಂಚಿಕಾರ್ ಪೇಟೆ ಸಮೀಪ ನೇತ್ರಾವತಿ ನದಿಯಲ್ಲಿ ಮ್ರತದೇಹ ಪತ್ತೆಯಾಗಿದೆ.
ಸ್ನಾನಕ್ಕೆ ಹೋದ ಪ್ರವೀಣ್ ಅವರ ಅಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಮ್ರತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮ್ರತದೇಹವನ್ನು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...