ಬಂಟ್ವಾಳ: ಬಂಟ್ವಾಳ ತಾಲೂಕು ಸಂಗಬೆಟ್ಟು ಮತ್ತು ಕರ್ಪೆ ಗ್ರಾಮದ (ಸಂಗಬೆಟ್ಟು) ನಿವೃತ್ತ ಗ್ರಾಮ ಸಹಾಯಕ ಬಾಬು ಶೆಟ್ಟಿಗಾರ್ (ಬಾಬಾಣ್ಣ) (80) ಜನವರಿ 2 ರಂದು ಬೆಳೆಗ್ಗೆ ಹೃದಯಘಾತದಿಂದ ಸ್ವಗೃಹ ಸಿದ್ದಕಟ್ಟೆಯಲ್ಲಿ ನಿಧನ ಹೊಂದಿದರು. ಶ್ರೀಯುತರು ಹಲವಾರು ವರ್ಷಗಳ ಕಾಲ ಸಂಗಬೆಟ್ಟು ಮತ್ತು ಕರ್ಪೆ ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಎಲ್ಲರಿಂದಲೂ ಉಗ್ರಾಣಿ ಬಾಬಣ್ಣ ಎಂದು ಪ್ರಸಿದ್ಧಿಗೊಂಡು ಜನಾನುರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು,ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಜನಸ್ತೋಮವನ್ನು ಅಗಲಿದ್ದಾರೆ. ಸ್ಥಳೀಯ ತಾ. ಪಂ. ಸದಸ್ಯ ಪ್ರಭಾಕರ ಪ್ರಭು, ಗ್ರಾ. ಪಂ. ಅದ್ಯಕ್ಸೆ ಗುಲಾಬಿ ಶೆಟ್ಟಿ, ಮಾಜಿ ಎ.ಪಿ.ಎಮ್.ಸಿ. ಸದಸ್ಯ ರತ್ನಕುಮಾರ್ ಚೌಟ ಅಂತಿಮ ದರ್ಶನ ಪಡೆದರು.
ಬಂಟ್ವಾಳ ಶಾಸಕ ರಾಜೆಶ್ ನಾಯ್ಕ್ ಉಳಿಪಾಡಿ, ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಮೋಹನ ಕೊಟ್ಟಾರಿ, ಕರ್ನಾಟಕ ರಾಜ್ಯದ ಗ್ರಾಮ ಸಹಾಯಕರ ಸಂಘದ ಗೌರವ ಅದ್ಯಕ್ಷ ಜನಾರ್ದನ ಬಂಟ್ವಾಳ ಸಂತಾಪ ಸೂಚಿಸಿದ್ದಾರೆ.














