ಬಂಟ್ವಾಳ: ವಿಷಪದಾರ್ಥ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರು ಸರಕಾರಿ ಆಸ್ಪತ್ರೆಯ ಲ್ಲಿ ಮೃತಪಟ್ಟ ಘಟನೆ ಮುಂಜಾನೆ ನಡೆದಿದೆ.

ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬರಿಮಾರು ಗ್ರಾಮದ ಮಾದುಗುಡಿ ನಿವಾಸಿ ತನಿಯಪ್ಪ ಮುಗೇರ ಅವರ ಮಗ ನವೀನ್ (23). ಮೃತಪಟ್ಟ ಯುವಕ .
ನವೀನ್ ಅವರು ಮಾ2 ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಕೂಲಿ ಕೂಲಿ ಕೆಲಸಕ್ಕೆ ಎಂದು ಹೊರಟು ಹೋಗಿದ್ದು ಮಧ್ಯಾಹ್ನ ದ ವೇಳೆ ಮನೆಯ ಮೊಬೈಲ್ ಗೆ ಪೋನ್ ಮಾಡಿ ತಾಯಿ ಜೊತೆ ಮಾತನಾಡಿ ನಾನು ಮುಳಿಬೈಲು ಗುಡ್ಡದಲ್ಲಿ ವಿಷಪದಾರ್ಥ ಸೇವಿಸಿದ್ದೇನೆ ಎಂದು ತಿಳಿಸಿದ್ದ.
ಅ ಕೂಡಲೇ ಮನೆಯವರು ಮತ್ತು ಸ್ನೇಹಿತರು ಗುಡ್ಡ ದ ಕಡೆ ಹೋಗಿ ನೋಡಿದಾಗ ನವೀನ್ ವಿಷಪದಾರ್ಥ ಸೇವಿಸಿ ಬಿದ್ದಿದ್ದರು.
ಆತನನ್ನು ಆರಂಭದಲ್ಲಿ ಮಾಣಿ ಪ್ರಾಥಮಿಕ ಆಸ್ಪತ್ರೆಗೆ ಕೊಂಡು ಹೋಗಿ ವೈದ್ಯರು ಪರೀಕ್ಷೆ ನಡೆಸಿ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ ಮೇರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೀನ್ ಇಂದು ಮುಂಜಾನೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ಕೂಡಾ ತಿಳಿದು ಬಂದಿಲ್ಲ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಗ್ರಾಮಾಂತರ ಪೋಲೀಸರು ತಿಳಿಸಿದ್ದಾರೆ

