Wednesday, February 12, 2025

ಕಾರು ರಿಕ್ಷಾ ಡಿಕ್ಕಿ ಅಕ್ಕತಂಗಿ ಸಾವು

ಬಂಟ್ವಾಳ : ಕಾರು ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ರಿಕ್ಷಾದಲ್ಲಿದ್ದ ಅಕ್ಕತಂಗಿ ಮಹಿಳೆಯರಿಬ್ಬರು ಅಸುನೀಗಿದ ಘಟನೆ ಇಂದು ಸಂಜೆ ಸಜೀಪದಲ್ಲಿ ನಡೆದಿದೆ.


ಮಂಚಿ ನಿವಾಸಿ ಗಳಾದ ಜೈನಾಬಾ(45) ಹಾಗೂ ಜೋಹರಾ (55) ಮ್ರತಪಟ್ಟಿದ್ದಾರೆ.
ಮಂಚಿ ನಿವಾಸಿಗಳಾದ ಅಕ್ಕ ತಂಗಿ ಯರು ಆಸ್ಪತ್ರೆ ಗೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿತು ಎಂದು ತಿಳಿಸಿದ್ದಾರೆ.
ಜೋಹರಾ ಅಸೌಖ್ಯದ ಹಿನ್ನೆಲೆಯಲ್ಲಿ ಜೈನಾಬಾ ಅವರು ಮಂಚಿಯಿಂದ ರಿಕ್ಷಾ ಬಾಡಿಗೆಗೆ ಗೊತ್ತುಮಾಡಿ ಚೇಲೂರಿಗೆ ವೈದ್ಯರ ಬಳಿ ತೆರಳುತ್ತಿದ್ದರು.
ಸಜೀಪ ಪಡು ಗ್ರಾಮದ ಕಂಚಿಲ ಎಂಬಲ್ಲಿ ಕಾರೊಂದು ಅತೀ ವೇಗವಾಗಿ ಇನ್ನೊಂದು ವಾಹನವನ್ನು ಒವರ್ ಟೇಕ್ ಮಾಡುವ ಭರದಿಂದ ಕಂಟ್ರೋಲ್ ತಪ್ಪಿ ಸಜೀಪ ಕಡೆಯಿಂದ ಬರುತ್ತಿದ್ದ ರಿಕ್ಷಾ ಕ್ಕೆ ಡಿಕ್ಕಿ ಹೊಡೆದಾಗ ರಿಕ್ಷಾ ಪಲ್ಟಿಯಾಗಿದೆ . ಪಲ್ಟಿಯಾದ ರಿಕ್ಷಾದಲ್ಲಿದ್ದ ಅಕ್ಕ ತಂಗಿಯರು ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ಮಂಗಳೂರು ಆಸ್ಪತ್ರೆ ಗೆ ಕೊಂಡುಹೋಗುವ ದಾರಿ ಮಧ್ಯೆ ಇವರು ಅಸುನೀಗಿದರು ಎಂದು ತಿಳಿಸಿದ್ದಾರೆ.
ರಿಕ್ಷಾ ಚಾಲಕ ಆಶ್ರಫ್ ಹಾಗೂ ಕಾರು ಚಾಲಕ ಮಹಮ್ಮದ್ ಸಿರಾಜ್ ಕೂಡಾ ಗಂಭೀರ ಗಾಯಗೊಂಡು ‌ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಮಂಜುನಾಥ್ ಬೇಟಿ ನೀಡಿದ್ದಾರೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...