ಬಂಟ್ವಾಳ: ಪ್ರಸಿದ್ದ ಹಿರಿಯ ಕಲಾವಿದ , ನಾಟಕ ರಚನೆಕಾರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ 9.30 ರ ಸುಮಾರಿಗೆ ಕಳ್ಳಿಗೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದರಿಬಾಗಿಲು ಬದ್ಯಾರು ನಿವಾಸಿ ಗಿರಿಯಪ್ಪ ಕುಲಾಲ್ ಬದ್ಯಾರು (58). ಹೃದಯಾಘಾತದಿಂದ ಸ್ವಗೃಹ ದಲ್ಲಿ ನಿಧನರಾದರು.
ಬಿಸಿರೋಡಿನ ಗಾಣದಪಡ್ಪು ಎಂಬಲ್ಲಿ “ಕಾಂತಿ ಆರ್ಟ್ಸ್ “ಎಂಬ ಹೆಸರಿನ ಸಂಸ್ಥೆಯ ಮೂಲಕ ಬ್ಯಾನರ್ , ಸಹಿತ ಅನೇಕ ರೀತಿಯ ಕಲೆಗೆ ಸಂಬಂಧಿಸಿದ ಕೆಲಸ ಕಾರ್ಯಗಳು ನಡೆಸುತ್ತಿದ್ದರು.
*__ನಾಟಕಕಾರ__* ಗಿರಿಯಪ್ಪ ಬದ್ಯಾರು ಅವರು ಹೆಸರು ನಾಟಕರಂಗದಲ್ಲಿ ಪ್ರಸಿದ್ಧಿ ಪಡೆದಿವೆ.
ಇವರು ಸುಮಾರು 60 ಕ್ಕೂ ಅಧಿಕ ತುಳು ಸಾಮಾಜಿಕ , ಹಾಸ್ಯ ಹಾಗೂ ಪೌರಾಣಿಕ ನಾಟಕಗಳನ್ನು ಇವರು ರಚಿಸಿದ್ದಾರೆ.
ಧರ್ಮಛತ್ರ ಪೌರಾಣಿಕ ನಾಟಕ ಹಲವು ಪ್ರಶಸ್ತಿ ಗಳನ್ನು ಪಡೆದ ನಾಟಕ ವಾಗಿದೆ.ಜೊತೆಗೆ ಸತ್ಯ ಓಲುಂಡು, ಕಾಳಿಂಗ, ಸತ್ಯ ಹರಿಶ್ಚಂದ್ರ ನಾಟಕಗಳು ಪ್ರಸಿದ್ದಿ ಪಡೆದ ನಾಟಕಗಳು.
ಯುವಕಲಾವಿದರಿಗೆ ಗಾಡ್ ಫಾದರ್
ಇವರ ಗರಡಿ ಯಲ್ಲಿ ಅನೇಕ ಕಲಾವಿದರು ಸೃಷ್ಟಿಯಾಗಿ, ವೇದಿಕೆ ಮೇಲೆ ಹೋದವರು. ಅನೇಕ ಯುವಕಲಾವಿದರಿಗೆ ಇವರು ಆಶ್ರಯ ದಾತರು ಆಗಿದ್ದರು. ಪ್ರತಿ ವರ್ಷ ಕಳ್ಳಿಗೆ ಗ್ರಾಮದಲ್ಲಿ ಉಚಿತವಾಗಿ ಹೊಸ ನಾಟಕಗಳನ್ನು ಪ್ರದರ್ಶನ ನೀಡುತ್ತಿದ್ದರು.
