ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಎರ್ಮಾಲ್ ಪಲ್ಕೆಯ ಅಕ್ಕಮ್ಮ (72) ತಮ್ಮ ಮನೆಯಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಆಕಾಶವಾಣಿಯ ಹಿರಿಯ ಪಾಡ್ದನ ಹಾಡುಗಾರ್ತಿಯಾಗಿದ್ದು, ಸರಳ ವ್ಯಕ್ತಿತ್ವದ ಮಹಿಳೆ. ಕೃಷಿಯೊಂದಿಗೆ ಬಾಣಂತಿಯರ ಉಪಚಾಕರಿ ಕೂಡ ಆಗಿದ್ದರು. ತುಳು ಪಾಡ್ದನ ಹಾಡುವ ಮೂಲಕ ತುಳುನಾಡಿನ ಹಾಡಿನ ಸೊಗಡನ್ನು ಉಳಿಸುವಲ್ಲಿ ಮಹತ್ತರ ಪಾತ್ರ ಇವರದಾಗಿತ್ತು.
ಮೃತರು ಮಕ್ಕಳಾದ ಸರೋಜಿನಿ, ಪುಷ್ಪ, ಚಂದ್ರಶೇಖರ, ಸದಾನಂದ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

