ಬಂಟ್ವಾಳ: ಅನಾರೋಗ್ಯ ದಿಂದ ವ್ಯಕ್ತಿಯೊಬ್ಬರುಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.

ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಅನಿಲಡೆ ನಿವಾಸಿ ದಿ.ಫಕೀರ ಭಂಡಾರಿ ಅವರ ಪುತ್ರ ಮೋಹನ ಭಂಡಾರಿ ( 40) ಮೃತಪಟ್ಟವರು.
ಕೂಲಿ ಕಾರ್ಮಿಕರಾಗಿದ್ದ ಮೋಹನಅವಿವಾಹಿತನಾಗಿದ್ದ. ಈ ಹಿಂದೆಯೇ ಅನಾರೋಗ್ಯದಿಂದ ಬಳಲುತ್ತಿದ್ದು, ಮದ್ಯ ವ್ಯಸನಿಯಾಗಿದ್ದ. ಲಾಕ್ ಡೌನ್ ನಿಂದಾಗಿ ಮದ್ಯವೂ ದೊರಕದೆ, ಔಷಧ ವೂ ಸೇವಿಸದೆ ನಿತ್ರಾಣಗೊಂಡಿದ್ದ ಎಂದು ಮನೆ ಮಂದಿ ತಿಳಿಸಿದ್ದಾರೆ.ಗುರುವಾರ ನಿತ್ರಾಣಗೊಂಡಿದ್ದ ಆತನನ್ನು ಮನೆ ಮಂದಿ ಆಸ್ಪತ್ರೆ ಗೆ ಕರಕೊಂಡು ಬಂದಿದ್ದು, ವೈದ್ಯ ರು ಪರೀಕ್ಷಿಸುವಂತೆ ಆತ ಸಾವನ್ನಪ್ಪಿದ್ದ.
ಹೃದಯಾಘಾತದಿಂದ ನಿಧನರಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.

