ಬಂಟ್ವಾಳ, ಫೆ. ೪: ಇಂಜಿನಿಯರೊಬ್ಬರು ಕೆಲಸ ಮಾಡುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಮೃತಪಟ್ಟ ಘಟನೆ ಕೈಕುಂಜೆ ಕೆಇಬಿ ಬಳಿ ಸೋಮವಾರ ನಡೆದಿದೆ.
ಪಿಡಬ್ಲ್ಯೂಡಿಯ ನಿವೃತ್ತ ಇಂಜಿನಿಯರ್, ಸಜೀಪ ಕಂದೂರು ನಿವಾಸಿ ಯುವರಾಜ್ ಎಂ.ಆಚಾರ್ಯ(.62) ಮೃತಪಟ್ಟವರು.
ಯುವರಾಜ್ ಅವರು ಇಂದು ಬಂಟ್ವಾಳದ ಕೈಕುಂಜೆಯ ಕೆಇಬಿ ಕಚೇರಿಯ ಬಳಿಯ
ಕರ್ನಾಟಕ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹಠಾತನೆ ಕುಸಿದು ಬಿದ್ದಿದ್ದರು. ತಕ್ಷಣ ಸ್ಥಳೀಯರು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ಇಲ್ಲಿನ ವೈದ್ಯರು ಖಚಿತಪಡಿಸಿದ್ದಾರೆ.


ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಬೇಟಿ ನೀಡಿದ್ದಾರೆ
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.